LATEST NEWS
ಗುಜರಾತಿನಲ್ಲಿ ಮತ್ತೆ ಕಮಲದ ಕಲರವ : ಕೈ ಕೊಟ್ಟು ಕಮಲ ಹಿಡಿದ ಹಿಮಾಚಲ
ಗುಜರಾತಿನಲ್ಲಿ ಮತ್ತೆ ಕಮಲದ ಕಲರವ : ಕೈ ಕೊಟ್ಟು ಕಮಲ ಹಿಡಿದ ಹಿಮಾಚಲ
ನವದೆಹಲಿ, ಡಿಸೆಂಬರ್ 18 : ಮುಂದಿನ ಲೋಕಸಭೆ ಚುನಾವಣೆಯ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಗುಜರಾತ್ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮತದಾರರು ಕಮಲದ ಕೈ ಹಿಡಿದಿದ್ದಾರೆ.
ಹಿಮಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ 24 ಸ್ಥಾನಗಳನ್ನು ಪಡೆದು ಅಧಿಕಾರ ಕಳೆದುಕೊಂಡು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2012ರ ವಿಧಾನಸಭಾ ಚುನಾವಣೆಯಲ್ಲಿ 68 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 36 ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿ 27 ಸ್ಥಾನ ಪಡೆದು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿತ್ತು.
ಈ ಕಡೆ ಗುಜರಾತನಲ್ಲೂ ಕಾಂಗ್ರೆಸ್ ಮೋಡಿ ನಡೆಯಲಿಲ್ಲ. ಮತದಾರ ಈ ಬಾರಿಯೂ ಬಿಜೆಪಿಯನ್ನೇ ಆಯ್ಕೆ ಮಾಡಿ ಅಧಿಕಾರ ನೀಡಿದೆ.
182 ವಿಧಾನ ಸಭಾ ಸೀಟುಗಳಿರುವ ಗುಜರಾತಿನಲ್ಲಿ 100 ಕ್ಕೂ ಅಧಿಕ ಸೀಟುಗಳು ಬಿಜೆಪಿ ಪಾಲಾಗಿವೆ.
70 ಸೀಟುಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ 2 ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ.