Connect with us

LATEST NEWS

ಕೋಮು ರಾಜಕಾರಣಕ್ಕೆ ದೇಯಿ ಬೈದ್ಯೆದಿ ಹೆಸರಿನಲ್ಲಿ ಹೋರಾಟ – ಮುನೀರ್ ಕಾಟಿಪಳ್ಳ

ಕೋಮು ರಾಜಕಾರಣಕ್ಕೆ ದೇಯಿ ಬೈದ್ಯೆದಿ ಹೆಸರಿನಲ್ಲಿ ಹೋರಾಟ – ಮುನೀರ್ ಕಾಟಿಪಳ್ಳ

ಮಂಗಳೂರು ಸಪ್ಟೆಂಬರ್ 17: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ ಅವರ ತಾಯಿ ದೇಯಿ ಬೈದ್ಯೆದಿಯ ವಿಗೃಹವನ್ನು ಶುದ್ಧೀಕರಣ ಮಾಡುತ್ತೇವೆ ಎಂದು ಹೊರಟ ಮತೀಯ ಶಕ್ತಿಗಳಿಗೆ ದೇಯಿ ಬೈದ್ಯೆದಿ ಆಗಲಿ, ಕೋಟಿ ಚನ್ನಯರ ಮೇಲಾಗಲಿ ಗೌರವ ಇಲ್ಲ. ಕೋಮುವಾದದ ರಾಜಕಾರಣಕ್ಕೆ ಅವರನ್ನು ವೇದಿಕೆಯನ್ನಾಗಿಸುವ ನಿಟ್ಟಿನಲ್ಲಿ ಮಾತ್ರವೇ ದೇಯಿ ಬೈದ್ಯೆದಿ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಡಿವೈಎಫ್ ಐ ರಾಜ್ಯಾದ್ಯಕ್ಷ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.

ಮಂಳೂರಿನಲ್ಲಿ ಆಯೋಜಿಸಲಾಗಿದ್ದ ಡಿ ವೈ ಎಫ್ ಐ ನ 13 ನೇ ದ,ಕ ಜಿಲ್ಲಾ ಸಮ್ಮೇಳನದಲ್ಲಿ ಆವರು ಮಾತನಾಡಿದರು. ದೇಯಿ ಬೈದೆದಿ ಬಗ್ಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ . ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆದಿ ಅವಮಾನ ಪ್ರಕರಣವನ್ನು ಪ್ರಥಮವಾಗಿ ಖಂಡಿಸಿದ್ದು, ಡಿವೈಎಫ್‍ಐ. ಆದರೆ ದೇಯಿ ಬೈದ್ಯೆತಿ ಅವರ ಬಗ್ಗೆ ಹೋರಾಟ ಆರಂಭಿಸಿದವರಿಗೆ ಇಲ್ಲಿವರೆಗೆ ದೇಯಿ ಬೈದ್ಯೆದಿ ಬಗ್ಗೆ ತಿಳಿದಿರಲಿಲ್ಲ . ಕೋಟಿ ಚೆನ್ನಯ್ಯ ಅವರ ಬಗ್ಗೆಯೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋಟಿ- ಚನ್ನಯರು ತುಳುನಾಡಿನ ಜನಪದ ಪುರುಷರು ಮಾತ್ರವಲ್ಲ ಅವರು ಈ ಮಣ್ಣಿನ ಇತಿಹಾಸ ಪುರುಷರು. ಅದನ್ನು ಅಧಿಕೃತವಾಗಿ ಘೋಷಿಸುವ ಕೆಲಸವಾಗಬೇಕು ಹಾಗೂ ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪಠ್ಯಪುಸ್ತಕ ಹೊರಬರಬೇಕು ಎಂದು ಒತ್ತಾಯಿಸಿದರು.

ತುಳುನಾಡಿನಲ್ಲಿ ಐದು ಶತಮಾನಕ್ಕೂ ಹಿಂದೆ ಕೋಟಿ ಚನ್ನಯರೆಂಬ ವೀರರು ಗರೋಡಿಗಳನ್ನು ಕಟ್ಟುವ ಮೂಲಕ ಯುವ ಸಮುದಾಯವನ್ನು ಸಂಘಟಿಸಿ ಅಸಮಾನತೆ ವಿರುದ್ಧ ಹೋರಾಟ ನಡೆಸಿದ್ದರು. ದ.ಕ. ಜಿಲ್ಲೆಯ ಇತಿಹಾಸವನ್ನು ನೋಡಿದಾಗ ಸುಮಾರು 500 ವರ್ಷಗಳ ಹಿಂದೆ ಆವಾಗಲೂ ಇಲ್ಲಿ ಅಸಮಾನತೆ, ಜೀತ ಪದ್ಧತಿ ಜ್ವಲಂತವಾಗಿತ್ತು. ಆ ಸಂದರ್ಭ  ಕೋಟಿ ಚನ್ನಯರೆಂಬ ಅವಳಿ ವೀರರು ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಟ ನಡೆಸಿದರು. ತುಳುನಾಡಿನ ಮೂಲೆ ಮೂಲೆಗೆ ತೆರಳಿ ಗರೋಡಿಗಳನ್ನು ಕಟ್ಟಿ, ಯುವಜನರನ್ನು ಸಂಘಟಿಸಿ, ಅಸಮಾನತೆ ವಿರುದ್ಧ ಹೋರಾಟವನ್ನು ನಡೆಸಿದರು. ಆದರೂ ಅವರು ಅಧಿಕೃತವಾಗಿ ಇತಿಹಾಸ ಪುರುಷರಾಗುವುದಿಲ್ಲ. ಅವರ ಬಗ್ಗೆ ವಿವಿಯಲ್ಲಿ ಪಠ್ಯವೂ ಆಗಿಲ್ಲ. ಕೋಟಿ ಚನ್ನಯರ ಅಸಮಾನತೆಯ ವಿರುದ್ಧದ ಹೋರಾಟ ಇಂದಿಗೂ ನಿಂತಿಲ್ಲ. ಡಿವೈಎಫ್‍ಐ ಆ ಹೋರಾಟವನ್ನು ಮುಂದುವರಿಸುತ್ತಿದೆ ಎಂದು ಅವರು ಹೇಳಿದರು.

ಅಂದು ಕೋಟಿ ಚನ್ನಯ್ಯರನ್ನೂ ಮರೆಯಲ್ಲಿ ನಿಂತು ಬಾಣ ಬಿಟ್ಟು ಕೊಲ್ಲಲಾಗಿತ್ತು. ಇಂದು ಡಿವೈಎಫ್‍ಐ ಕಾರ್ಯಕರ್ತರನ್ನು, ಇಂತಹ ವಿಚಾರಧಾರೆಗಳನ್ನು ಮುಂದಿಡುವ ದಾಬೋಲ್ಕರ್, ಗೌರಿಲಂಕೇಶ್, ಕಲ್ಬುರ್ಗಿಯಂತಹವರನ್ನು ಹತ್ಯೆ ಮಾಡಲಾಗುತ್ತದೆ. ಆದರೆ ಈ ಹೋರಾಟ ನಿಲ್ಲುವುದಿಲ್ಲ. ಕೋಟಿಚನ್ನಯರು ನಾಂದಿಹಾಡಿದ ಹೋರಾಟವನ್ನು ಡಿವೈಎಫ್‍ಐ ಮುಂದುವರಿಸಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ದೇಯಿ ಬೈದ್ಯೆದಿ ತುಳುನಾಡಿನವರ ತಾಯಿ. ಇಲ್ಲಿನ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಶೋಷಿತ ಸಮುದಾಯದವರೆಲ್ಲರ ತಾಯಿ ಆಕೆ. ಆಕೆ ಹೆತ್ತ ಅವಳಿ ವೀರರು ಅಸಮಾನತೆ, ಶೋಷಿತ ಸಮುದಾಯಕ್ಕೆ ನ್ಯಾಯಕ್ಕಾಗಿ ಹೋರಾಡಿದವರು. ಹಾಗಾಗಿ ದೇಯಿ ಬೈದೆದಿ ವಿಚಾರವನ್ನು ಮತೀಯ ಅಜೆಂಡಾಕ್ಕೆ ಬಳಕೆ ಮಾಡುವುದು ಬೇಡ ಎಂದು ಅವರು ಕರೆನೀಡಿದರು.

ಈ ಸಂದರ್ಭದಲ್ಲಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಕಿರಣ್ ಗಾಜನೂರು , ಹಿಂಸೆಯನ್ನು ಭಾಷೆಯನ್ನಾಗಿಸುವ ಇಂದಿನ ಕಾಲಘಟ್ಟದಲ್ಲಿ, ಕೋಮುವಾದದ ವಿರುದ್ಧದ ಹೋರಾಟವು ತಳ ಸಮುದಾಯದ ಬೇಡಿಕೆ ಮತ್ತು ಹಕ್ಕುಗಳನ್ನು ಪ್ರತಿಪಾದಿಸುವ ಪ್ರತಿರೋಧದ ಹೋರಾಟವನ್ನಾಗಿಸಿ ಯುವ ಸಮುದಾಯ ಮುಂದುರಿಯಬೇಕಾಗಿದೆ ಎಂದು ಕರೆ ನೀಡಿದರು.

ವಿಡಿಯೋಗಾಗಿ….

Share Information
Continue Reading
Advertisement
Click to comment

Leave a Reply

Your email address will not be published. Required fields are marked *