Connect with us

DAKSHINA KANNADA

ಕೆ.ಐ.ಡಿ.ಬಿ ಅಧಿಕಾರಿ ವಿರುದ್ಧ ಗೂಂಡಾ ವರ್ತನೆ ತೋರಿದ ವಿದ್ಯಾ ದಿನಕರ್ ವಿರುದ್ಧ ಪ್ರಕರಣ ದಾಖಲು

ಕೆ.ಐ.ಡಿ.ಬಿ ಅಧಿಕಾರಿ ವಿರುದ್ಧ ಗೂಂಡಾ ವರ್ತನೆ ತೋರಿದ ವಿದ್ಯಾ ದಿನಕರ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು,ಮಾರ್ಚ್ 15: ಮಂಗಳೂರಿನ ಬೈಕಂಪಾಡಿಯಲ್ಲಿರುವ ಕೆ.ಐ.ಡಿ.ಬಿ ಕಛೇರಿಯಲ್ಲಿ ಗೂಂಡಾ ವರ್ತನೆ ತೋರಿದ ಮಹಿಳಾ ಹೋರಾಟಗಾರ್ತಿ ವಿದ್ಯಾ ದಿನಕರ್ ಸೇರಿದಂತೆ 50 ಜನರ ಮೇಲೆ ಪಣಂಬೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ.ಆರ್.ಪಿ.ಎಲ್ ನ ನಾಲ್ಕನೇ ಹಂತದ ಭೂ ಸ್ವಾಧೀನ ವಿಚಾರ ಕುರಿತಂತೆ ವಿದ್ಯಾ ದಿನಕರ್ ಸೇರಿದಂತೆ 50 ಜನರಿದ್ದ ತಂಡ ಏಕಾಏಕಿ ಕೆ.ಐ.ಡಿ.ಬಿ ಕಛೇರಿಗೆ ನುಗ್ಗಿದ್ದಾರೆ.

ಬೈಕಂಪಾಡಿಯ ಕಛೇರಿಯಲ್ಲಿದ್ದ ಕೆ.ಐ.ಡಿ.ಬಿ ಯ ಎಫ್.ಡಿ.ಸಿ ಚಂದ್ರಶೇಖರ್ ವಿರುದ್ಧ ಜೀವ ಬೆದರಿಕೆಯನ್ನು ಒಡ್ಡುವ ಮೂಲಕ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ನಡೆಯುವಂತೆ ದಮ್ಕಿ ಹಾಕಿದ್ದಾರೆ.

ಅಲ್ಲದೆ ಕಛೇರಿಗೆ ಬೀಗ ಜಡಿಯಲೂ ಮುಂದಾಗಿದ್ದಾರೆ.

ಎಂ.ಆರ್.ಪಿ.ಎಲ್ ನ ನಾಲ್ಕನೇ ಘಟಕಕ್ಕೆ ಬೇಕಾಗುವ ಭೂ ಸ್ವಾಧೀನದ ಮಾಹಿತಿ ನೀಡುವಂತೆ ಹೇಮಲತಾ ಎನ್ನುವವರು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದು, ಈ ವಿಚಾರವಾಗಿ ವಿದ್ಯಾ ದಿನಕರ್ ಹಾಗೂ ಅವರ ತಂಡ ಕೆ.ಐ.ಡಿ.ಬಿ ಕಛೇರಿಗೆ ಆಗಮಿಸಿ ದಾಂಧಲೆ ನಡೆಸಿದೆ.

ಮಾಹಿತಿ ಪತ್ರವನ್ನು ಹರಿದು ಹಾಕಿದ ಈ ತಂಡ ಅಧಿಕಾರಿಯ ಕಿವಿಯನ್ನು ಹಿಂಡಿ ಹಲ್ಲೆ ನಡೆಸಿದೆಯಲ್ಲದೆ, ಜೀವ ಬೆದರಿಕೆಯನ್ನೂ ಒಡ್ಡಿದೆ ಎಂದು ಪೋಲೀಸ್ ದೂರಿನಲ್ಲಿ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *