Connect with us

LATEST NEWS

ಕುಂದಾಪುರದಲ್ಲಿ ಹಾವು ತಂದ ಸಾವು

ಕುಂದಾಪುರದಲ್ಲಿ ಹಾವು ತಂದ ಸಾವು

ಉಡುಪಿ, ಸೆಪ್ಟೆಂಬರ್ 23 : ಅಡ್ಡ ಬಂದ ಹಾವನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳಕೊಂಡ ಧಾರುಣ ಘಟನೆ ಉಡುಪಿ ಜಿಲ್ಲೆ ಕುಂದಾಪುದಲ್ಲಿ ಸಂಭವಿಸಿದೆ.

ಕುಂದಾಪುರದ ಕೋಟೇಶ್ವರ ಬಳಿಯ ಕಾಳಾವರದಲ್ಲಿ ಈ ಘಟನೆ ನಡೆದಿದ್ದು, ಹಾಲಾಡಿ ನಿವಾಸಿ ಗಂಗಾಧರ ಅವರೇ ಮೃತ ದುರ್ದೈವಿಯಾಗಿದ್ದಾರೆ.
ಹಾಲಾಡಿ – ಕೋಟೇಶ್ವರ ರಸ್ತೆಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಗಂಗಾಧರ ಅವರು ಏಕಾಎಕಿ ಬೈಕಿಗೆ ಹಾವೊಂದು ಅಡ್ಡ ಬಂದಿದೆ.

ಹಾವನ್ನು ತಪ್ಪಿಸಲು ಗಂಗಾಧರ ಅವರು ಬ್ರೇಕ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು ಗಂಗಾಧರ ಅವರ ಬೈಕಿಗೆ ಡಿಕ್ಕಿ ಗುದ್ದಿದೆ.

ಪರಿಣಾಮ ರಸ್ತೆಗೆ ಎಸೆಲ್ಪಟ್ಟ ಗಂಗಾಧರ ಅವರು ತೀವೃವಾಗಿ ಗಾಯಗೊಂಡು, ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಗಂಗಾಧರ ಹಾಲಾಡಿ ಗ್ಯಾರೆಜ್ ಮಾಲಕ ರುದ್ರ ಅಚಾರ್ಯ ಅವರ ಮಗನಾಗಿದ್ದು, 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಸ್ಥಳಿಯ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *