Connect with us

LATEST NEWS

ಕಾಟಿಪಳ್ಳ ಸಫ್ವಾನ್ ಅಪಹರಣಕ್ಕೆ 10 ದಿನ : ಕೊಲೆ ಶಂಕೆ

ಕಾಟಿಪಳ್ಳ ಸಫ್ವಾನ್ ಅಪಹರಣಕ್ಕೆ 10 ದಿನ : ಕೊಲೆ ಶಂಕೆ

ಮಂಗಳೂರು, ಅಕ್ಟೋಬರ್ 16: ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಸ್ಥಳೀಯ ಯುವಕ ಸಫ್ವಾನ್ ಎಂಬಾತನನ್ನು ರೌಡಿ ತಂಡವೊಂದು ಅಪಹರಿಸಿ  10 ದಿನಗಳು ಕಳೆದಿದ್ದು, ಇದುವರೆಗೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಸಾಧ್ಯತೆಗಳು ದಟ್ಟವಾಗಿವೆ.

ಹಾಡುಹಗಲೇ ನಡುಬೀದಿಯಲ್ಲಿ ನಡೆದಿರುವ ಅಪಹರಣ ಪ್ರಕರಣವನ್ನು ಈವರಗೆ ಭೇದಿಸಲು ಪೊಲೀಸರಿಗೆ ಸಾಧ್ಯವಾಗದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಪಹೃತ ಸಫ್ವಾನ್ ನನ್ನು ಪೊಲೀಸರು ಪತ್ತೆಹಚ್ಚಲು ಕ್ರಮಕೈಗೊಳ್ಳಬೇಕು. ಸುರತ್ಕಲ್, ಕೃಷ್ಣಾಪುರ ಪ್ರದೇಶದಲ್ಲಿ ಹಾವಳಿಯಿಡುತ್ತಿರುವ ಗಾಂಜಾ ದಂಧೆ, ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಬೇಕು ಎಂದು dyfi ಸುರತ್ಕಲ್ ಘಟಕ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಸುರತ್ಕಲ್ , ಕೃಷ್ಣಾಪುರ ಸೇರಿದಂತೆ ಆಸುಪಾಸಿನಲ್ಲಿ ರೌಡಿತಂಡಗಳ ಚಟುವಟಿಕೆ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಗಾಂಜಾ ಸಹಿತ ಮಾದಕ ಪದಾರ್ಥಗಳ ಮಾರಾಟ ಜಾಲ ಯುವಜನತೆಯನ್ನು ದಾರಿತಪ್ಪಿಸುತ್ತಿದೆ. ಸುಲಿಗೆ, ಬೆದರಿಸಿ ಹಣ ವಸೂಲಿ ದಂಧೆಗಳು ನಡೆಯುತ್ತಿದೆ. ಈ ಹಿಂದೆ ಹಲವು ಅಪಹರಣ, ಅತ್ಯಾಚಾರ, ಹಫ್ತಾ ವಸೂಲಿ, ದರೋಡೆ ಮುಂತಾದ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕುಖ್ಯಾತ ಕ್ರಿಮಿನಲ್ ಗಳು ಈ ಭಾಗದಲ್ಲಿ ಬೀಡು ಬಿಟ್ಟಿರುವುದು ಜನಸಾಮಾನ್ಯರ ನೆಮ್ಮದಿ ಕೆಡಿಸಿದೆ. ಇಂತಹ ಕುಖ್ಯಾತ ತಂಡವೊಂದು ಸಫ್ವಾನ್ ಎಂಬ ಯುವಕನನ್ನು ಬೆನ್ನಟ್ಟಿ ಸಾರ್ವಜನಿಕರ ಮುಂದೆಯೇ ಹಲ್ಲೆಗೈದು ಅಪಹರಿಸಿದೆ. ಅಪಹರಣ ನಡೆದು ವಾರ ಕಳೆದರೂ ಸಫ್ವಾನ್ ನನ್ನು ಪತ್ತೆಹಚ್ಚಲು, ಅಪಹರಿಸಿದ ರೌಡಿ ತಂಡವನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಸ್ಥಳೀಯ ನಾಗರಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಅಪಹರಣಗೊಂಡ ಸಫ್ವಾನ್ ಇರುವಿಕೆಯ ಬಗ್ಗೆ ಮಾಹಿತಿ ಇಲ್ಲದೆ ಆತನ ಬಡ ಕುಟುಂಬ ಕಂಗಾಲಾಗಿದೆ.

ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಥಳೀಯವಾಗಿ ಭೀತಿಯುಂಟು ಮಾಡುತ್ತಿರುವ ರೌಡಿ ಚಟುವಟಿಕೆ, ಗಾಂಜಾ ಮಾರಾಟ ಜಾಲವನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು dyfi ಸುರತ್ಕಲ್ ಘಟಕ ಒತ್ತಾಯಿಸಿದ್ದು ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸುರತ್ಕಲಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲು ಡಿ ವೈ ಎಫ್ ಐ ಉದ್ದೇಶಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *