LATEST NEWS
ಕರಾವಳಿಯಲ್ಲಿ ಮತ್ಸ್ಯಾ ಕ್ಷಾಮ : ಮೀನುಗಾರರ ಬದುಕು ಅತಂತ್ರ

ಕರಾವಳಿಯಲ್ಲಿ ಮತ್ಸ್ಯಾ ಕ್ಷಾಮ : ಮೀನುಗಾರರ ಬದುಕು ಅತಂತ್ರ
ಮಂಗಳೂರು, ಮಾರ್ಚ್ 07 : ಮಂಗಳೂರಿನಲ್ಲಿ ಒಂದು ಕೆ.ಜಿ ಭೂತಾಯಿ ಮೀನಿಗೆ ಪ್ರಸ್ತುತ 200 ರೂಪಾಯಿ ದರ ಎಂದರೆ ನೀವು ನಂಬ್ತೀರಾ ? ಇಲ್ಲಾ ಕಾರಣ ಬಡವರ ಮೀನೆಂದೆ ಹೆಸರು ಪಡೆದಿರುವ ಭೂತಾಯಿ ಮೀನಿಗೆ ಭಾರಿ ಸೀಸನ್‌ನಲ್ಲೂ ರೂಪಾಯಿ 60 ರ ಗಡಿ ದಾಟಿಲ್ಲ.
ಉಳಿದ ಮೀನುಗಳ ಬೆಲೆಯಂತೂ ಗಗನಕ್ಕೆ ಮುಟ್ಟಿದೆ. ಹೌದು ಕಳೆದ ಕೆಲ ದಿನಗಳಿಂದ ಕರಾವಳಿಯ ಮೀನು ಮಾರುಕಟ್ಟೆಯಲ್ಲಿ ಈ ತರ ಮೀನಿನ ದರ ಒಂದೇ ಸವನೆ ಏರುತ್ತಲಿದೆ. ಕಾರಣ ಮಾತ್ರ ನಿಗೂಢವಾಗಿದೆ. ಭಾರಿ ಮೀನು ಸಿಗಬೇಕಾದ ಈ ಪರ್ವಕಾಲದಲ್ಲಿ ಮೀನಿನ ಕ್ಷಾಮ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಂಟಾಗಿದೆ. ಮೀನಿನ ಭಾರಿ ಪ್ರಮಾಣದಲ್ಲಿ ಇಳುವರಿ ಕುಂಟಿತವಾಗಿದ್ದು.ಕರಾವಳಿಯ ಮೀನುಗಾರರ ಬದುಕು ಅತಂತ್ರವಾಗಿದೆ. ಮೀನು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಆಳ ಸಮುದ್ರದ ಮೀನುಗಾರಿಕೆ ಮಾಡುವ ದೋಣಿಗಳು ತಟದಲ್ಲಿ ಲಂಗರು ಹಾಕಿ ನಿಂತಿವೆ.ಮೀನುಗಾರಿಕೆಯಿಂದಲೇ ಜೀವನ ಸಾಗುತ್ತಿದ್ದ ಸಾವಿರಾರು ಕುಟುಂಬಗಳು ಕೈ ಚೆಲ್ಲಿ ಕೂತಿವೆ. ಇದೇ ಪರಿಸ್ಥಿತಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮನೆ ಮಾಡಿದೆ. ಇಲ್ಲಿನ ಮೀನುಗಾರರು ಕಂಗಾಲಾಗಿದ್ದಾರೆ. ಸುಮಾರು 90 ಶೇಕಡದಷ್ಟು ಸಮುದ್ರ ಮೀನುಗಾರಿಕೆ ದೋಣಿಗಳು ಮೀನುಗಾರಿಕೆ ನಿಲ್ಲಿಸಿದ್ದಾರೆ,, ಕಳೆದ ಎರಡು ವರ್ಷಗಳಿಂದ ವಿಶೇಷವಾಗಿ ಫೆಬ್ರವರಿಯಲ್ಲಿ ಮೀನುಗಳ ಬರವನ್ನು ಎದುರಿಸುತ್ತಿದ್ದೇವೆ. “ಆಳ ಸಮುದ್ರದ ಮೀನುಗಾರರು ಈ ಸಮಯದಲ್ಲಿ ಮೀನುಗಾರಿಕೆ ನಿಲ್ಲಿಸುತ್ತಾರೆ. ಅವರಿಗೆ ಉತ್ತಮ ಮೀನುಗಳು ಸಿಗುವುದಿಲ್ಲ ಎನ್ನುವುದು ಗೊತ್ತಾಗಿದೆ.
.ಮೀನುಗಾರಿಕೆಗಾಗಿ ಸಮುದ್ರಕ್ಕೆ ದೋಣಿ ಕಳುಹಿಸಲು, ಪ್ರತಿ ಬಾರಿ ಕನಿಷ್ಠ 1 ಲಕ್ಷ ಹೂಡಿಕೆಯ ಅಗತ್ಯವಿರುತ್ತದೆ. ಒಂದು ಲಕ್ಷ ರು. ಮೌಲ್ಯದ ಮೀನುಗಳನ್ನು ಅವರು ಹಿಡಿಯಲು ಸಾಧ್ಯವಾಗದಿದ್ದರೆ, ದೋಣಿ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಾರೆ ” ಎನ್ನುತ್ತಾರೆ ಮೀನುಗಾರ ಮುಖಂಡರು. ಒಂದು ಕಡೆ ಮೀನುಗಾರರು ನಷ್ಟ ಅನುಭವಿಸಿದ್ದರೆ ಮತ್ತೊಂದೆಡೆ ಇದನ್ನೇ ಮಾರಿ ಜೀವನ ಸಾಗಿಸುವ ಲಕ್ಷಾಂತರ ಕುಟುಂಬಗಳು ಕಂಗಲಾಗಿ ಕೈ ಚೆಲ್ಲಿವೆ. ಆದ್ದರಿಂದ ಇದಕ್ಕೊಂದು ಸರ್ಕಾರ ಸಹಾಯದ ಹಸ್ತ ಕೊಡಬೇಕೆಂದು ಮೀನುಗಾರರ ಒಕ್ಕೋರಲ ಆಗ್ರಹವಾಗಿದೆ.
