LATEST NEWS
ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಕಡಲ್ಕೊರೆತದ ಕಲ್ಲು ರೆಸಾರ್ಟ್‌ಗಳಿಗೆ ಅಡಿಗಲ್ಲು

ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಕಡಲ್ಕೊರೆತದ ಕಲ್ಲು ರೆಸಾರ್ಟ್‌ಗಳಿಗೆ ಅಡಿಗಲ್ಲು
ಕರಾವಳಿ ಭಾಗದಲ್ಲಿ ಮಳೆಗಾಲ ಸಂದರ್ಭದಲ್ಲಿ ಪ್ರತಿ ಬಾರಿಯೂ ಕಡಲು ಕೊರೆತ ಸಂಭವಿಸೋದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತದ ಸಮಸ್ಯೆ ಹೆಚ್ಚಾಗಿದೆ.ಪ್ರತಿ ವರ್ಷವೂ ಈ ಭಾಗದಲ್ಲಿ ಹಲವು ಕುಟುಂಬಗಳು ಕಡಲ್ಕೊರೆತಕ್ಕೆ ಸಿಲುಕಿ ಹತ್ತಾರು ಕುಟುಂಬಗಳು ಸಂತ್ರಸ್ತರಾಗುತ್ತಿದೆ.
ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಉಳ್ಳಾಲದಿಂದ ತಲಪಾಡಿ ಕಡಲ ಕಿನಾರೆ ವರೆಗೂ ತಡೆಗೋಡೆ ನಿರ್ಮಿಸುವ ಕಾಮಗಾರಿಯೂ ಆರಂಭಗೊಂಡಿದೆ.

ಆದರೆ ಉಚ್ಚಿಲದಲ್ಲಿ ಮಾತ್ರ ಕಡಲಿಗೆ ತಡೆಗೋಡೆ ನಿರ್ಮಿಸುವ ಬದಲು ರೆಸಾರ್ಟ್ ಒಂದರ ಸಂಪೂರ್ಣ ಆವರಣಕ್ಕೆ ತಡೆಗೋಡೆಗೆಂದು ತಂದ ಕಲ್ಲುಗಳನ್ನು ಹಾಕುವ ಮೂಲಕ ಔದಾರ್ಯ ಮೆರೆಯಲಾಗಿದೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಂಪೂರ್ಣ ಕೈವಾಡ ಇದ್ದರೆ ಮಾತ್ರ ಈ ರೀತಿಯ ಉದಾರತೆ ಮೆರೆಯಲು ಸಾಧ್ಯ ಎನ್ನುವ ಆರೋಪವೂ ಸ್ಥಳೀಯರಿಂದ ಇದೀಗ ಕೇಳಿ ಬರುತ್ತಿದೆ.
ಸೋಮೇಶ್ವರ , ಉಚ್ಚಿಲ ಹಾಗೂ ತಲಪಾಡಿ ಕಡಲ ಕಿನಾರೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಕಡಲು ಕೊರೆತ ಸಂಭವಿಸುತ್ತಿದ್ದು, ಇದೇ ಕಾರಣಕ್ಕಾಗಿಯೇ ಸಮುದ್ರ ಕರಾವಳಿಯಲ್ಲಿ ಮನೆ ಹಾಗೂ ಕಟ್ಟಡಗಳನ್ನು ಕಟ್ಟಲು ಪರವಾನಗಿ ನಿರಾಕರಿಸಲಾಗುತ್ತಿದೆ.
ಅಲ್ಲದೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಈ ಭಾಗದಲ್ಲಿ ನಿರ್ಮಿಸಲಾಗಿದ್ದ ಅನಾಧಿಕೃತ ರೆಸಾರ್ಟ್ ಗಳನ್ನು ಯಾರ ಒತ್ತಡಕ್ಕೂ ಜಗ್ಗದೆ ನಿರ್ದಕ್ಷಿಣವಾಗಿ ಕೆಡವಿ ಹಾಕುವ ಮೂಲಕ ತೆರವುಗೊಳಿಸಿದ್ದರು.
ಆದರೆ ಇದೀಗ ಮತ್ತೆ ಉಚ್ಚಿಲ ಕಡಲು ಕಿನಾರೆಯಲ್ಲಿ ಮಾತ್ರ ಗೆಸ್ಟ್ ಹೌಸ್ ಗಳ ಸಂಖ್ಯೆ ಮಿತಿಮೀರಿ ಹೆಚ್ಚಾಗಲು ಪ್ರಾರಂಭವಾಗಿದೆ.
ವಿಡಿಯೋಗಾಗಿ…