UDUPI
ಉಡುಪಿಯಲ್ಲಿ ಕಿರಿಯ ಪೇಜಾವರ ಶ್ರೀಗಳ ಕ್ರಿಕೆಟ್ ಆಟ

ಉಡುಪಿಯಲ್ಲಿ ಕಿರಿಯ ಪೇಜಾವರ ಶ್ರೀಗಳ ಕ್ರಿಕೆಟ್ ಆಟ
ಉಡುಪಿ ನವೆಂಬರ್ 04: ಉಡುಪಿಯಲ್ಲಿ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮಧ್ವಟ್ರೋಫಿ ಕ್ರಿಕೆಟ್ ಕೂಟಕ್ಕೆ ಚಾಲನೆ ಸಿಕ್ಕಿದೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದ ಕಿರಿಯ ಸ್ವಾಮೀಜಿಗಳು. ಮಧ್ವಟ್ರೋಫಿ ಕ್ರಿಕೆಟ್ ಕೂಟ ಇದಾಗಿದ್ದು ವಿಶ್ವಪ್ರಸನ್ನ ಸ್ವಾಮಿಜಿಗಳು ಕ್ರಿಕೆಟ್ ಆಟ ಆಡುವ ಮೂಲಕ ಚಾಲನೆ ನೀಡಿದರು.
ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸ್ವಾಮಿಜಿಗಳಿಂದ ಕ್ರಿಕೆಟ್ ಆಟದ ಝಲಕ್, ಫೋರ್ ಗಳ ಸುರಿಮಳೆ, ನಂತರ ಮಾತನಾಡಿದ ಕಿರಿಯ ಸ್ವಾಮಿಜಿಗಳು ಪೂರ್ವಾಶ್ರಮದಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್ ಆಟ ಆಡ್ತಾಯಿದ್ದೆ, ಆದರೆ ಕ್ರಿಕೆಟ್ ಬಗ್ಗೆ ಹೆಚ್ಚು ಒಲವಿಲ್ಲ ಎಂದರು.. ಆದರೂ ಕ್ರಿಕೆಟ್ ಆಟದ ಬಗ್ಗೆ ಮಾಹಿತಿ ಇದೆ ಎಂದರು.

VIDEO
Continue Reading