LATEST NEWS
ಉಗ್ರರಿಗೆ ಹಣಕಾಸು ನೆರವು : ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಉಗ್ರರಿಗೆ ಹಣಕಾಸು ನೆರವು : ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ಮಂಗಳೂರು,ಅಕ್ಟೋಬರ್ 14 : ಇಂಡಿಯನ್ ಮುಜಾಹಿ ದೀನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಮಂಗಳೂರಿನಲ್ಲಿ ಐದು ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಅಯಿಶಾ ಭಾನು

ಉಗ್ರ ಸಂಘಟನೆಗಳಿಗೆ ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಮಂಗಳೂರಿನಲ್ಲಿ ಈ ದಾಳಿ ನಡೆಸಿ ಆಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಧೀರಜ್ ಸಾವೋ ಎಂಬಾತನ ಹಣದ ವ್ಯವಹಾರವನ್ನು ಗಮನಿಸಿದ ಜಾರಿ ನಿರ್ದೇಶನಲಯ ಈತನಿಗೆ ಸೇರಿದ ಆಸ್ತಿ ಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಈತನ ಬ್ಯಾಂಕ್ ಖಾತೆಗೆ ದೇಶದ ವಿವಿಧ ಭಾಗಗಳಿಂದ ಹಣ ಹರಿದು ಬಂದಿತ್ತು. ಈ ಹಣದಲ್ಲಿ ತನ್ನ ಕಮಿಷನ್ ಇರಿಸಿಕೊಳ್ಳುತ್ತಿದ್ದ ಸಾವೋ ಉಳಿದ ಹಣವನ್ನು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಜುಬೈರ್ ಹುಸೇನ್, ಅಯಿಶಾ ಬಾನು, ರಾಜು ಖಾನ್ ಮತ್ತು ಇತರರ ಖಾತೆಗೆ ರವಾನಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿದ ಇಡಿ ಅಧಿಕಾರಿಗಳು ಸಾವೋ ವಹಿವಾಟಿನ ಮೇಲೆ ಸಂದೇಹ ಇತ್ತು. ಹೀಗಾಗಿ ಚಲನವಲನಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೆವು. ಈತನ ಹಣದ ಸಹಾಯದಿಂದಲೇ ಅಯಿಶ ಭಾನು ಮತ್ತು ಹುಸೇನ್ ಮಂಗಳೂರಿನ ಪಂಜಿ ಮೊಗರುವಿನಲ್ಲಿ ಖರೀದಿಸಿದ್ದ ವಸತಿಯೋಗ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಈ ಎಲ್ಲ ಆರೋಪಿಗಳು ಪಾಕಿಸ್ಥಾನ ನಾಗರಿಕ ಖಾಲಿದ್ ಜತೆ ನೇರಾ ಸಂಪರ್ಕದಲ್ಲಿದ್ದರು. ಈತನ ನಿರ್ದೇಶನದ ಮೇರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಉಗ್ರರಿಗೆ ಹಣವನ್ನು ಕಳುಹಿಸ ಲಾಗುತ್ತಿತ್ತು. ಜತೆಗೆ ತಮಗೆ ಸೇರಬೇಕಾದ ಕಮಿಷನ್ ಅನ್ನೂ ಪಡೆದುಕೊಳ್ಳುತ್ತಿದ್ದರು.
ಈ ಎಲ್ಲ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಅನಾಮಧೇಯ ವ್ಯಕ್ತಿಗಳು ಹಣ ಹಾಕುತ್ತಿದ್ದರು. ಎಲ್ಲಿ ಅಕೌಂಟ್ ಓಪನ್ ಆಗಿರುತ್ತದೆಯೋ ಆ ಶಾಖೆ ಬಿಟ್ಟು ಉಳಿದ ಕಡೆಗಳಲ್ಲಿ ತತ್‌ಕ್ಷಣವೇ ಎಟಿಎಂಗಳನ್ನು ಬಳಸಿಕೊಂಡು ಹಣ ತೆಗೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
2013 ರಲ್ಲಿ ಅಯಿಶಾ ಭಾನು ಅವರನ್ನು ಮಂಗಳೂರಿನ ಪಂಜಿಮೊಗರುನಲ್ಲಿ ಇಂಡಿಯನ್ ಮುಜಾಹಿದಿನ್ ಉಗ್ರರ ಸಂಪರ್ಕದ ಆರೋಪದಲ್ಲಿ ಬಂಧಿಸಲಾಗಿತ್ತು.
Continue Reading