DAKSHINA KANNADA
ಅಲ್ಪಸಂಖ್ಯಾತರಿಗೆ ರಾಜ್ಯ ಸರಕಾರದ ಇನ್ನೊಂದು ಗಿಫ್ಟ್, ಕೋಮುಗಲಭೆ ಭಾಗಿಯಾದವರ ಕೇಸು ಲಿಫ್ಟ್
ಅಲ್ಪಸಂಖ್ಯಾತರಿಗೆ ರಾಜ್ಯ ಸರಕಾರದ ಇನ್ನೊಂದು ಗಿಫ್ಟ್, ಕೋಮುಗಲಭೆ ಭಾಗಿಯಾದವರ ಕೇಸು ಲಿಫ್ಟ್
ಮಂಗಳೂರು,ಜನವರಿ 26: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನೊಂದು ಭಾಗ್ಯದ ಕೊಡುಗೆ ನೀಡಿದ್ದಾರೆ. ಕೋಮುಗಲಭೆಗಳಲ್ಲಿಮುಗ್ದ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡುವ ಭಾಗ್ಯವನ್ನು ರಾಜ್ಯ ಸರಕಾರ ಘೋಷಿಸಿದೆ.
ಪೋಲೀಸ್ ಮಹಾ ನಿರ್ದೇಶಕರ ಕಛೇರಿಯಿಂದ ರಾಜ್ಯದ ಎಲ್ಲಾ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳ ಕಛೇರಿ ಹಾಗೂ ನಗರ ಪೋಲೀಸ್ ಆಯುಕ್ತರ ಕಛೇರಿಗೆ ಈ ನಿರ್ದೇಶನ ನೀಡಲಾಗಿದೆ.
ಈಗಾಗಲೇ ಈ ಆದೇಶ ಪತ್ರ ಎಲ್ಲಾ ಜಿಲ್ಲೆಗಳ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿದೆ
. ಸರಕಾರದ ಈ ಆದೇಶ ಪತ್ರದ ಪ್ರಕಾರ ರಾಜ್ಯದ ಎಲ್ಲಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಅಲ್ಪಸಂಖ್ಯಾತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿಲು ಪತ್ರದಲ್ಲಿ ಈ ಹಿಂದೆಯೇ ತಿಳಿಸಲಾಗಿದೆ.
ಆದೇಶ ಪತ್ರದ ಪ್ರಕಾರ 2013, 2014, 2015, 2016 ಮತ್ತು 2017 ರ ಸಾಲಿನಲ್ಲಿ ದಾಖಲಾದ ಎಲ್ಲಾ ಕೇಸುಗಳನ್ನು ಪರಿಶೀಲಿಸಿ ಅದರಲ್ಲಿ ಅಮಾಯಕರಾಗಿರುವ ಅಲ್ಪಸಂಖ್ಯಾತರನ್ನು ಮಾತ್ರ ಕೇಸಿನಿಂದ ಮುಕ್ತಗೊಳಿಸಬೇಕೆಂದು ಸೂಚಿಸಲಾಗಿದೆ.
ಈ ಬಗ್ಗೆ ಕ್ರಮ ಕೈಗೊಳ್ಳದ ಅಯಾ ಅಧಿಕಾರಿಗಳು ಪೋಲೀಸ್ ಮಹಾನಿರ್ದೇಶಕರ ಕಛೇರಿಗೆ ಶೀಘ್ರ ಮಾಹಿತಿ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ಮಾತ್ರ ವಾಪಾಸು ಪಡೆಯಬೇಕೆಂಬ ಸರಕಾರದ ಆದೇಶ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.