LATEST NEWS
ಅಕ್ರಮ ಗೋ ಸಾಗಾಟ ವಾಹನದ ಮೇಲೆ ಪೊಲೀಸರಿಂದ ಪೈರಿಂಗ್

ಅಕ್ರಮ ಗೋ ಸಾಗಾಟ ವಾಹನದ ಮೇಲೆ ಪೊಲೀಸರಿಂದ ಪೈರಿಂಗ್
ಪುತ್ತೂರು ನವೆಂಬರ್ 16: ಅಕ್ರಮ ಗೋ ಸಾಗಾಟ ವಾಹನದ ಮೇಲೆ ಪೊಲೀಸರು ಎರಡು ಸುತ್ತು ಗುಂಡುಹಾರಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಕೆದಿಲ ಬಳಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದು ಹಾಗೂ ಕಸಾಯಿಖಾನೆಗೆ ಈ ಗೋವುಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪುತ್ತೂರು ನಗರ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲೀಸರು ಗೋ ಸಾಗಾಟ ನಡೆಸುತ್ತಿದ್ದ ಪಿಕ್ ಅಪ್ ವಾಹನವನ್ನು ನಿಲ್ಲಿಸಲು ಸೂಚಿಸಿದ್ದರು, ಆದರೆ ಪೋಲೀಸರು ಸೂಚನೆ ನೀಡಿದರೂ ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ವಾಹನದ ಮೇಲೆ ಪೋಲೀಸರು ಎರಡು ಸುತ್ತು ಗುಂಡು ಹಾರಿಸಿ ವಾಹನವನ್ನು ನಿಲ್ಲಿಸಿದ್ದಾರೆ. ವಾಹನವನ್ನು ವಶಕ್ಕೆ ಪಡೆದು ಅಮಾನುಷವಾಗಿ ತುಂಬಿದ್ದ 11 ಗೋವುಗಳನ್ನು ರಕ್ಷಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.