ಉಡುಪಿ, ಆಗಸ್ಟ್ 22 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ತಿಂಗಳ ಒಂದು ಮಂಗಳವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ನಿರ್ದೇಶನದಂತೆ ‘ಪ್ರೇರಣಾ’ ಕಾರ್ಯಕ್ರಮವನ್ನು ಜಿಲ್ಲಾ ವಾತಾರ್ಧಿಕಾರಿ ರೋಹಿಣಿ ಕೆ ರವರು ಗುಂಡ್ಮಿ ಸರಕಾರಿ ಪ್ರೌಢ ಶಾಲೆ ಹತ್ತನೇ ತರಗತಿಯ ಮಕ್ಕಳೊಂದಿಗೆ ನಡೆಸಿಕೊಟ್ಟರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡುವ ಉದ್ದೇಶವನ್ನು ಹೊಂದಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಕಾರ್ಯಕ್ರಮವು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಹೆಣ್ಣುಮಕ್ಕಳು ಹತ್ತನೇ ತರಗತಿಯ ನಂತರ ಶಾಲೆಯನ್ನು ಬಿಡದಂತೆ ಪ್ರೇರೇಪಿಸುವುದಾಗಿದೆ.
ಗುಂಡ್ಮಿ ಸರಕಾರಿ ಪ್ರೌಢ ಶಾಲೆಯ ಪ್ರೌಢಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳಾದ ಶಿಲ್ಪಾ, ಆಶ್ಲೇಖಾ, ಮುಶ್ರಿಫಾ ನಾಜ್, ಫಾಹಿನ್, ಪ್ರಿಯಾ ಇವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿಯವರೊಂದಿಗೆ ಸಂವಾದ ನಡೆಸಿದರು.