DAKSHINA KANNADA
ಹಟ್ಟಿಯಿಂದ ಕದ್ದ ದನಗಳ್ಳರ ಬಂಧನ : ಪ್ರತಿಭಟನೆ ಕೈಬಿಟ್ಟ ಗೋ ಸಂರಕ್ಷಣಾ ಪ್ರಕೋಷ್ಠ
ಮಂಗಳೂರು, ಆಗಸ್ಟ್ 31 : ಬುಧವಾರ ಕೂಳೂರು ಮೇಲುಕೊಪ್ಪಲದ ನವೀನ್ ಶೆಟ್ಟಿ ಎಂಬವರ ಮನೆಯಿಂದ ಕದ್ದ ದನ ಕಳ್ಳರನ್ನು ಪೋಲಿಸರು ಬಂಧಿಸಿದ್ದಾರೆ. ನವೀನ್ ಶೆಟ್ಟಿ ಅವರ ದನ ಕಳ್ಳತನ ನಡೆಸಿದ್ದ ಅಶ್ರಫನ್ನು ಸೇರಿ ಇನ್ನಿಬ್ಬರು ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ. ಈ ಪ್ರಕರಣವನ್ನು ಖಂಡಿಸಿ ಬಿ.ಜೆಪಿ ಗೋ ಸಂರಕ್ಷಣಾ ಪ್ರಕೋಷ್ಟ ಇಂದು ಕಾವೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆರೋಪಿಗಳನ್ನು ಬಂಧಿಸಿದ್ದ ಬಗ್ಗೆ ಕಾವೂರು ಪೋಲಿಸರು ಗೋ ಸಂರಕ್ಷಣಾ ಪ್ರಕೋಷ್ಟಕ್ಕೆ ಮಾಹಿತಿ ನೀಡಿದ್ದರು.
ರಾಜ್ಯ ಗೋ ಸಂರಕ್ಷಣಾ ಪ್ರಕೋಷ್ಟದ ಸಹ ಸಂಚಾಲಕರಾದ ವಿನಯ್. ಎಲ್. ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಬಿ. ಜೆ. ಪಿ ಅಧ್ಯಕ್ಷರಾದ ಡಾ. ಭರತ್. ಶೆಟ್ಟಿ ಅವರು ಇಂದು ಖುದ್ದಾಗಿ ಕಾವೂರು ಪೋಲಿಸ್ ಠಾಣೆಗೆ ತೆರಳಿ ಆರೋಪಿಗಳ ಬಂಧನ ಬಗ್ಗೆ ಖಚಿತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳತನದ ಬಗ್ಗೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವಂತೆ ಠಾಣಾಧಿಕಾರಿಯೊಂದಿಗೆ ಚರ್ಚಿಸಿ ಇಂದಿನ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
You must be logged in to post a comment Login