ಪುತ್ತೂರು, ಆಗಸ್ಟ್ 10 : ಪ್ರಸಕ್ತ ಶೈಕ್ಷಣಿಕ ಸಾಲಿನ ಮಂಗಳೂರು ವಿಶ್ವವಿದ್ಯಾನಿಯದ ಪ್ರಸಾರಾಂಗ ಪ್ರಕಟಿಸಿರುವ ಪ್ರಥಮ ಬಿ.ಸಿ.ಎ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಕನ್ನಡ ಮಾಧ್ಯಮ ಪಠ್ಯಪುಸ್ತಕದಲ್ಲಿ ದೇಶದ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಿರುವ ಅಘಅತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಠ್ಯ ಪುಸ್ತಕದಲ್ಲಿ ಖ್ಯಾತ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿರುವ ‘ ಯುದ್ದ ಒಂದು ಉದ್ಯಮ ‘ ಎಂಬ ಪಠ್ಯವೊಂದರಲ್ಲಿ ಸಾಹಿತಿಗಳು ತಮ್ಮ ಸ್ನೇಹಿತರೋರ್ವ ಸೈನಿಕನಾಗಿದ್ದು, ಆತ ತನಗೆ ಸೈನಿಕರು ಗಡಿಯಲ್ಲಿ ಅತ್ಯಾಚಾರದ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನುವ ವಿಚಾರವನ್ನು ಬರಗೂರು ತನ್ನ ಪಠ್ಯದಲ್ಲಿ ಸೇರಿಸಿದ್ದಾರೆ. ಯುದ್ಧ  ಒಂದು ಉದ್ಯಮ ಎನ್ನುವ ಶಿರೋನಾಮೆಯ ಈ ಪಠ್ಯದಲ್ಲಿ ತನ್ನ ಸ್ನೇಹಿತನ ಮಾತನ್ನು ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕದಲ್ಲಿ ಸೇರಿಸುವ ಮೂಲಕ ದೇಶದ ಸೈನಿಕರಿಗೆ ಅವಮಾನ ಮಾಡಿದ್ದಾರೆ.

ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ್ದ, ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿಯಾಗಿದ್ದವು, ಅಷ್ಟೇ ಅಲ್ಲ ಆತಂಕಕಾರಿಯೂ ಆಗಿದ್ದವು ಎಂದು ಆರಂಭಿಸಿರುವ ಬರಗೂರು ರಾಮಚಂದ್ರಪ್ಪ ಬಳಿಕ ಸೈನಿಕರಲ್ಲಿ ದೇಶಭಕ್ತಿಯ ಲೇಪನವಿರುತ್ತದೆ, ಸ್ವತ್ಹ ಸೈನಿಕರ ಚರ್ಮದ ಮೇಲೆ ದೇಶಭಕ್ತಿಯನ್ನು ಬರೆಯಲಾಗುತ್ತದೆ. ಆದರೆ ಸೈನಿಕರೂ ಮನುಷ್ಯರು ಎನ್ನುವುದನ್ನು ನಾವು ಮರೆಯುತ್ತೇವೆ. ಮನೆ ಬಿಟ್ಟು ಗಡಿಯಲ್ಲಿರುವ ಯೋಧನಲ್ಲಿ ಒಂಟಿತನ ಮತ್ತು ವಿಕೃತಿಗಳಿರುತ್ತದೆ ಎನ್ನುವ ಅಧಾರರಹಿತ ವಿಚಾರವನ್ನು ವಿದ್ಯಾರ್ಥಿಗಳು ಓದುವಂತಹ ಪುಸ್ತಕದಲ್ಲಿ ಬರೆಯಲಾಗಿದೆ. ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆ  ಎನ್ನುವುದು ನನ್ನ ಗೆಳೆಯನ ಅನುಭವದ ಮಾತು ಎಂದು ಬರೆದಿರುವ ಬರಗೂರು ರಾಮಚಂದ್ರಪ್ಪ ಗಡಿಯಲ್ಲಿ ಪರಸ್ಪರ ಮುತ್ತಿಗೆ ನಡೆದಾಗ ಗಡಿಗ್ರಾಮಗಳಲ್ಲಿ ಅತ್ಯಾಚಾರವೂ ನಡೆಯುತ್ತದೆ ಎಂದೂ ಎರಡೂ ರಾಷ್ಟ್ರಗಳ ಸೈನಿಕರು ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎನ್ನುವ ವಿಚಾರವನ್ನು ಮಂಡಿಸುತ್ತಾರೆ. ಆದರೆ ನಾವೆಲ್ಲಾ ಸೈನಿಕರನ್ನು ಸಜ್ಜನರೆಂದು ನಂಬುತ್ತೇವೆ ಎನ್ನುವುದನ್ನೂ ಪಠ್ಯದಲ್ಲಿ ಬರೆದಿರುತ್ತಾರೆ. ಆದರೆ ವಿದ್ಯಾರ್ಥಿಗಳು ಓದುವ ಪುಸ್ತಕದಲ್ಲಿ ಇಂಥ ಆಧಾರರಹಿತ ವಿಚಾರವನ್ನು ತಿಳಿಸುವ ಮೂಲಕ ಸಾಹಿತಿಗಳು ಏನನ್ನು ಸಾಧಿಸಲು ಹೊರಟಿದ್ದಾರೆ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಯಾರೋ ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ವಿದ್ಯಾರ್ಥಿಗಳು ಓದುವ ಪುಸ್ತಕದಲ್ಲಿ ಪ್ರಕಟಿಸುವ ಅಗತ್ಯವಾದರೂ ಏನಿತ್ತು ಎನ್ನುವ ಆಕ್ಷೇಪಗಳೂ ಇದೀಗ ಕೇಳಿಬರುತ್ತಿದೆ.  ಆಧಾರರಹಿತ ಆರೋಪಗಳನ್ನು ಪಠ್ಯಪುಸ್ತಕದಲ್ಲಿ ಪ್ರಕಟಿಸುವ ಅಗತ್ಯವಾದರೂ ಏನು ಎನ್ನುವ ಜೊತೆಗೆ ಸ್ನೇಹಿತ ಬೇರೆ ಎನೇನೋ ಹೇಳುತ್ತಾನೆ ಎಂದ ಮಾತ್ರಕ್ಕೆ ಅವುಗಳನ್ನೂ ವಿದ್ಯಾರ್ಥಿಗಳು ಓದುವ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆಯೇ ? . ವಿದ್ಯಾರ್ಥಿಗಳಿಗೆ ನೀಡುವ ಪಠ್ಯದಲ್ಲಿ ಪ್ರತಿಯೊಂದು ವಿಚಾರಕ್ಕೂ ಆಧಾರ ಸಹಿತವಾಗಿ ನೀಡುವ ಕ್ರಮವಿದ್ದರೂ, ಇಲ್ಲಿ ಮಾತ್ರ ಲೇಖಕರ ಯಾವನೋ ಒಬ್ಬ ಸ್ನೇಹಿತ ಏನೋ ಹೇಳಿದ ಎನ್ನುವ ರೀತಿಯಲ್ಲಿ ಸ್ಪಷ್ಟತೆಯನ್ನು ಮರೆಮಾಚಿ ಪಠ್ಯ ಪುಸ್ತಕದಲ್ಲಿ  ಪ್ರಕಟಿಸಿರುವ ಮಂಗಳೂರು ವಿಶ್ವವಿದ್ಯಾನಿಯಲದ ಪ್ರಸಾರಂಗ ವಿಭಾಗ ಯೋಧರ ಬಗ್ಗೆ ಅವಹೇಳನಕಾರಿ ಬರಹವಿರುವ ಪಠ್ಯ ಪ್ರಕಟಿಸಿದರ ಹೊಣೆ ಹೊರಬೇಕಿದೆ. ಇತಿಹಾಸದ ಬಗ್ಗೆಯೋ, ಅಥವಾ ಇನ್ನಾವುದೋ ಘಟಿಸಿ ಹೋದ ಘಟನೆಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಪ್ರಕಟಿಸಬೇಕಾದರೆ, ಆ ಕಾಲದ ಶಾಸನ ಹಾಗೂ ಇತರ ಪುರಾವೆಗಳ ಉಲ್ಲೇಖವನ್ನೂ ಮಾಡುವುದು ಸಾಮಾನ್ಯವಾಗಿದ್ದರೂ, ಈ ಪುಸ್ತಕದಲ್ಲಿ ಮಾತ್ರ ಲೇಖಕರು ಯಾವುದೋ ಒಂದು ಎಜೆಂಡಾ ಹಾಗೂ ತನ್ನ ವೈಯುಕ್ತಿಕ ವಿಚಾರವನ್ನು ವಿದ್ಯಾರ್ಥಿಗಳ ಪಠ್ಯಪುಸ್ತಕದ ಮೂಲಕ ಹೇರುವ ಪ್ರಯತ್ನ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳೂ ಇದೀಗ ಕೇಳಿಬರುತ್ತಿದೆ. ಈ ಮಧ್ಯೆ ಈ ವಿಚಾರವನ್ನು ಮಾಜಿ ಸೈನಿಕರ ಸಂಘ ಕೂಡಾ ಗಂಭೀರವಾಗಿ ಪರಿಗಣಿಸಿದ್ದು,ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಬರಹಗಳನ್ನು ಬರೆದ ಬರಗೂರು ಹಾಗೂ ಇದನ್ನು ಪ್ರಕಟಿಸಿದ ಮಂಗಳೂರು ವಿವಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಂಘದ ಪದಾಧಿಕಾರಿಗಳ ಸಭೆ ಸೇರಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಮುಂದೆ ತನ್ನ ಆಕ್ಷೇಪಣೆಯನ್ನು ಸಲ್ಲಿಸಲು ತೀರ್ಮಾನಿಸಿದೆ.

15 Shares

Facebook Comments

comments