Connect with us

  DAKSHINA KANNADA

  ಸೆ.1 ಬಕ್ರಿದ್ ಹಬ್ಬ ಸಾರ್ವತ್ರಿಕ ರಜೆ

  ಮಂಗಳೂರು, ಅಗಸ್ಟ್ 30 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ಸಾರ್ವತ್ರಿಕ ರಜೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಯಲ್ಲಿ ಮುಸ್ಲೀಮರ ಪವಿತ್ರ ಹಬ್ಬ ಬಕ್ರೀದ ನ್ನು ಸೆಪ್ಟೆಂಬರ್ ಒಂದಕ್ಕೆ ಆಚರಿಸಲಾಗುತ್ತಿದೆ. ಸರ್ಕಾರದ ಪ್ರಕಾರ ಅಧಿಕೃತವಾಗಿ ಸೆಪ್ಟೆಂಬರ್ 2 ರಂದು ಬಕ್ರಿದ್ ರಜೆಯಾಗಿತ್ತು. ಆದರೆ ಬಕ್ರಿದ್ ಸೆಪ್ಟೆಂಬರ್ 2 ಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ರಜೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮುಸ್ಲೀಂ ಸಂಘಟನೆಗಳು ರಜಾ ದಿನವನ್ನು ಬದಲಾಯಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದುವು. ಇದೀಗ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಮನವಿ ಮೇರೆಗೆ ಸರ್ಕಾರ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆದು  ಸೆಪ್ಟೆಂಬರ್ 1 ಸಾರ್ವತ್ರಿಕ ರಜೆಯನ್ನಾಗಿ ಘೋಷಣೆ ಮಾಡಿದೆ.

  Share Information
  Advertisement
  Click to comment

  You must be logged in to post a comment Login

  Leave a Reply