Connect with us

  LATEST NEWS

  ಸೆಪ್ಟೆಂಬರ್ 7 ರಂದು ಬೃಹತ್ ಯುವ ಮೋರ್ಚಾ ರಾಲಿ, ಮಂಗಳೂರಿಗೆ ದಿಗ್ಬಂಧನ

  ಮಂಗಳೂರು, ಆಗಸ್ಟ್ 22 : ಸೆಪ್ಟೆಂಬರ್ 7 ರಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿದೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಈ ಸಭೆ ಆಯೋಜಿಸಲಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹಿತ ಆನೇಕ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ದತೆಗಳು ರಾಜ್ಯಮಟ್ಟದಲ್ಲಿ ಆರಂಭಗೊಂಡಿದ್ದು ರಾಜ್ಯ ನಾಯಕರುಗಳಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ.

  ಇದಕ್ಕೆ ಪೂರ್ವಭಾವಿಯಾಗಿ ಮಂಗಳೂರು ಚಲೋ ಎಂಬ ಘೋಷವಾಕ್ಯದಡಿ ರಾಜ್ಯದ 5 ಕಡೆಗಳಿಂದ ಏಕಕಾಲದಲ್ಲಿ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು, ಬೆಂಗಳೂರು, ಶಿವಮೊಗ್ಗ ಹುಬ್ಬಳ್ಳಿ- ಧಾರವಾಡ ಹಾಗೂ ಮೈಸೂರಿನಿಂದ ಈ ಬೈಕ್ ಜಾಥಾಗಳು ಅರಂಭವಾಗಲಿದ್ದು, ಮಂಗಳೂರಿಗೆ ಸೆಪ್ಟೆಂಬರ್ 7 ರಂದು ತಲುಪಲಿವೆ.

  ದೇಶ ವಿರೋಧಿ ಸಂಘಟನೆಗಳ ನಿಷೇಧ, ಸಿಬಿಐಗೆ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಸೇರಿದಂತೆ ಇತರ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ತನಿಖೆಗೆ ವಹಿಸುವಂತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ರಾಜೀನಾಮೆಗೆ ಆಗ್ರಹಿಸಿ ಈ ಜನಾಂದೋಲನ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.

  ಶರತ್ ಮಡಿವಾಳ ಸೇರಿ ಹತ್ಯೆಯಾದ ಹಿಂದೂ ಕಾರ್ಯಕರ್ತರ ಭಾವಚಿತ್ರ ಒಳಗೊಂಡ ವಾಹನ ಜೊತೆಗೆ, ದಾರಿ ಮಧ್ಯೆ ಸಿಗುವ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಬಳಿಕ ಚುರುಕು ಗೊಂಡಿರುವ ರಾಜ್ಯ ಬಿಜೆಪಿ ಯುವ ಮೋರ್ಚಾದ ಮೂಲಕ ಪಕ್ಷವನ್ನು ತಳಮಟ್ಟದಿಂದ ಇನ್ನೂ ಸಧೃಡಗೊಳಿಸಲು ಚಿಂತನೆ ನಡೆಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.

  Share Information
  Advertisement
  Click to comment

  You must be logged in to post a comment Login

  Leave a Reply