DAKSHINA KANNADA
ಸುರತ್ಕಲ್ ನಲ್ಲಿ ಹೆದ್ದಾರಿಯಲ್ಲೇ ರಾಹುಲ್ ಸಭೆ, ಬಿಜೆಪಿಯಿಂದ ಆಕ್ಷೇಪ
ಸುರತ್ಕಲ್ ನಲ್ಲಿ ಹೆದ್ದಾರಿಯಲ್ಲೇ ರಾಹುಲ್ ಸಭೆ, ಬಿಜೆಪಿಯಿಂದ ಆಕ್ಷೇಪ
ಮಂಗಳೂರು,ಮಾರ್ಚ್ 20: ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸುರತ್ಕಲ್ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷ ತನ್ನ ವಿರೋಧ ವ್ಯಕ್ತಪಡಿಸಿದೆ.
ಎ.ಐ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಹುಲ್ ಗಾಂಧಿಯ ಚೊಚ್ಚಲ ದಕ್ಷಿಣಕನ್ನಡ ಜಿಲ್ಲಾ ಭೇಟಿ ಇದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಿರ್ವಹಿಸಲು ಕಾಂಗ್ರೇಸ್ ಪಕ್ಷ ಪಣತೊಟ್ಟಿದೆ.
ಅದೇ ಪ್ರಕಾರ ಉಡುಪಿಯಿಂದ ಜಿಲ್ಲೆಗೆ ಆಗಮಿಸುವ ರಾಹುಲ್ ಗಾಂಧಿಗೆ ಮುಲ್ಕಿಯಲ್ಲಿ ಸ್ವಾಗತಿಸುವ ಮೂಲಕ ಸುರತ್ಕಲ್ ನಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ.
ಆದರೆ ಈ ಸಭೆ ನಡೆಯುವ ವೇದಿಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ನಿರ್ಮಿಸಲಾಗಿದೆ.
ಅತ್ಯಂತ ಜನನಿಭಿಡ ಪ್ರದೇಶವಾಗಿರುವ ಸುರತ್ಕಲ್ ಪೇಟೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದಕ್ಕೆ ಬಿಜೆಪಿ ಪಕ್ಷ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ಇಲ್ಲಿ ವೇದಿಕೆ ನಿರ್ಮಾಣ ಮಾಡಿರುವುದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ತಕ್ಷಣ ವೇದಿಕೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದೆ.
ಈ ಸಂಬಂಧ ಬಿಜೆಪಿ ಮುಖಂಡರು ನಗರ ಪೋಲೀಸರಿಗೆ ದೂರು ನೀಡಿದ್ದು, ಈ ವಿಚಾರವಾಗಿ ಪೋಲೀಸರಿಗೆ ಹಾಗೂ ಬಿಜೆಪಿ ಮುಖಂಡರ ಮಧ್ಯೆ ವಾಗ್ವಾದವೂ ನಡೆದಿದೆ.
ಒಂದು ವೇಳೆ ಕಾಂಗ್ರೇಸ್ ಈ ಪ್ರದೇಶದಲ್ಲಿ ಕಾರ್ಯಕ್ರಮವನ್ನು ನಡೆಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಗಳು ಸೇರಿ, ದೇವಸ್ಥಾನದ ಕಾರ್ಯಕ್ರಮಗಳನ್ನೂ ಇಲ್ಲೇ ಆಯೋಜಿಸುವ ಎಚ್ಚರಿಕೆಯನ್ನೂ ಬಿಜೆಪಿ ನೀಡಿದೆ.
ವಿಡಿಯೋಗಾಗಿ..
You must be logged in to post a comment Login