DAKSHINA KANNADA
ಸುನೀಲ್ ಕುಮಾರ್ ಬಜಾಲ್ ಗೆ ಪಿತೃ ವಿಯೋಗ
ಸುನೀಲ್ ಕುಮಾರ್ ಬಜಾಲ್ ಗೆ ಪಿತೃ ವಿಯೋಗ
ಮಂಗಳೂರು, ಮಾರ್ಚ್ 25 : ಸಾಮಾಜಿಕ ಹೋರಾಟಗಾರ,ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಅವರ ತಂದೆ ಶ್ರೀದರ್ ಕುಂಟಲ್ ಗುಡ್ಡೆ ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಶನಿವಾರ ರಾತ್ರಿ 10:55ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶ್ರೀದರ್ ಕುಂಟಲ್ ಗುಡ್ಡೆ ಬಾಲ್ಯದ ದಿನದಿಂದಲೇ ರೈತ ಕಾರ್ಮಿಕ ಚಳುವಳಿಯ ಕಡೆಗೆ ಆಕರ್ಷಿತರಾದವರು.
ಬದುಕಿನ ಕೊನೆಯವರೆಗೂ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಶಿಸ್ತಿನ ಕಟ್ಟಾಳುವಾಗಿ ದುಡಿದರು.
ಅಳಪೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಸದ್ಯ ಗೌರವಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
You must be logged in to post a comment Login