ಮಂಗಳೂರು,ಜುಲೈ23:ಸಾವಿನ ಮನೆಯಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಲು ಹೋದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ. ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಕೂಳೂರಿನ ಪಳನೀರು ನಿವಾಸಿ ನಿಖಿಲೇಶ್ ಎನ್ನುವ ಬಾಲಕ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆ ಹಿನ್ನಲೆಯಲ್ಲಿ ಬಾಲಕನ ಮನೆಗೆ ಭೇಟಿ ನೀಡಿದ ಸ್ಥಳೀಯ ಶಾಸಕ ಮೊಯಿದೀನ್ ಬಾವ ತಾನು ಬಾಲಕನ ಚಿಕಿತ್ಸೆಗಾಗಿ 1 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತೆಗೆಸಿಕೊಟ್ಟಿರುವುದಾಗಿ ಸ್ಥಳದಲ್ಲಿದ್ದವರಲ್ಲಿ ಹೇಳುತ್ತಿದ್ದರು.ಇದರಿಂದ ಆಕ್ರೋಶಕ್ಕೊಳಗಾದ ಸಾರ್ವಜನಿಕರು ಶಾಸಕನ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.ಸಾವಿನ ಮನೆಯಲ್ಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದ ಶಾಸಕರು ಒಂದು ಲಕ್ಷ ಮಾತ್ರ ನೀಡಿರುವುದಲ್ಲದೆ, ಅದನ್ನು ಸಾವಿನ ಮನೆಯಲ್ಲಿ ಡಂಗುರ ಹೊಡೆಯ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯೂ ಸಾರ್ವಜನಿಕರದ್ದಾಗಿದೆ.ಜನಪ್ರತಿನಿಧಿಗಳು ನೀಡುವ ಪರಿಹಾರ ಆತ ತನ್ನ ಕೈಯಿಂದ ನೀಡುವುದಲ್ಲ, ಅದು ಜನ ಕಟ್ಟಿದ ತೆರಿಗೆಯ ಹಣ ಎನ್ನುವುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕಿದೆ.

ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ

 

172 Shares

Facebook Comments

comments