ಮಂಗಳೂರು ಅಗಸ್ಟ್ 13 : ದಕ್ಷಿಣಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕ ಅಹಾರ ಸಚಿವ ಯು, ಟಿ. ಖಾದರ್‌ ಆಗಮಿಸಿದ್ದರು. ಆದರೆ ಸಚಿವ ಯು.ಟಿ ಖಾದರ್ ಬುಲ್ಡೋಜರ್ ಹತ್ತಿ ಸ್ವತಹ ತಾವೇ ಬುಲ್ಡೋಜರ್ ಚಲಾಯಿಸಿ ಕಾಮಗಾರಿಗೆ ಚಾಲನೆ ನೀಡಿದರು. ಇದನ್ನು ದೂರದಿಂದ ನೋಡಿದ  ಸಚಿವರ ಮುಖ ಪರಿಚಯ ಸ್ಪಷ್ಟವಾಗಿ ತಿಳಿಯದ ಸ್ಥಳೀಯ ವ್ಯಕ್ತಿಯೊಬ್ಬರು “ಇದೇನು? ಬುಲ್ಡೋಜರ್ ಡ್ರೈವರ್ ಇಷ್ಟು ಟಿಪ್ ಟಾಪ್ ಆಗಿದ್ದಾರೆ ಅಲ್ವಾ” ಎಂದು ಪ್ರಶ್ನಿಸಿದ್ದಾರೆ, ಆಗ ಪಕ್ಕದಲ್ಲೇ ಇದ್ದ ಮತ್ತೊಬ್ಬರು “ಅದು ಬುಲ್ಡೋಜರ್ ಡ್ರೈವರ್ ಅಲ್ಲ, ನಮ್ಮ ಮಿನಿಸ್ಟರ್ ಖಾದರ್ ಸಾಹೇಬ್ರು” ಎಂದು ತಿಳಿಸಿದರು.