BANTWAL
ಸಂಘಪರಿವಾರದ ಶಾಲೆಗಳಿಗೆ ಅನುದಾನ ಕಟ್ ; ಅನ್ನದ ಬಟ್ಟಲುಗಳೊಂದಿಗೆ ಬೀದಿಗಳಿದ ವಿದ್ಯಾರ್ಥಿ ಸಮೂಹ
ಬಂಟ್ವಾಳ, ಆಗಸ್ಟ್ 11 : ಸಂಘಪರಿವಾರದ ಶಾಲೆಗಳಿಗೆ ಅನುದಾನ ಕಟ್, ಈ ಹಿನ್ನೆಲೆಯಲ್ಲಿ ಅನ್ನದ ಬಟ್ಟಲುಗಳೊಂದಿಗೆ ಬೀದಿಗಿಳಿದಿದೆ ವಿದ್ಯಾರ್ಥಿ ಸಮೂಹ. ಅನ್ನ ಕಸಿದ ಸಿದ್ದರಾಮಯ್ಯ ಎನ್ನುವ ಘೋಷಣೆ ಎಂದು ಕಲ್ಲಡ್ಕದ ಸೇರಿದಂತೆ ಬಂಟ್ವಾಳದ ಬಿಸಿ ರೋಡ್ ನಲ್ಲಿ ಕೇಳಿ ಬಂತು. ಬಂಟ್ವಾಳ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಅನುದಾನ ರದ್ದು ಮಾಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಅನುದಾನ ರದ್ದು ಮಾಡಿರುವುದನ್ನು ವಿರೋಧಿಸಿ ಶಾಲೆಯ ವಿದ್ಯಾರ್ಥಿಗಳು ತಅಲೂಕು ಕೆಂದ್ರ ಕಚೇರಿ ಬಿ ಸಿ ರೋಡಿನಲ್ಲಿ ರಸ್ತೆಗಿಳಿದು ತಿಭಟನೆ ನಡೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರಕ್ಕೆ ಭಾರಿ ತೊಡಕಾಯಿತು. ತಮ್ಮ ಊಟದ ಬಟ್ಟಲು ಹಿಡಿದು ರಸ್ತೆಗಿಳಿದ ಎರಡೂ ಶಾಲೆಯ ನಾಲ್ಕು ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು ಅನ್ನ ಕಸಿದ ಸಿದ್ದರಾಮಯ್ಯ ಎನ್ನುವ ಘೋಷಣೆ ಕೂಗಿ ಸರ್ಕಾರಕ್ಕೆ ಧಿಕ್ಕಾರ ಹೇಳಿದರು. ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದಿಂದ ಈ ಎರಡೂ ವಿದ್ಯಾ ಕೇಂದ್ರಕ್ಕೆ ಬರುತ್ತಿದ್ದ ಅನುದಾನವನ್ನು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಹೋರಾಟ ಆರಂಭವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಚಿವರು ಈಗಾಗಲೇ ಇದರಲ್ಲಿ ತನ್ನ ಪಾತ್ರವಿಲ್ಲ ಎಂಬ ಸ್ಟಷ್ಟೀಕರಣ ನೀಡಿದ್ದರೂ. ಮುಂಬಾರುವ ಚುನಾವಣೆಯಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಡಿಯೋಗಾಗಿ ಈ ಕೆಳಗಿನ ಲಿಂಕನ್ನು ಒತ್ತಿರಿ..
You must be logged in to post a comment Login