ಪುತ್ತೂರು, ಅಗಸ್ಟ್ 8: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಾಗೂ ಸರಕಾರದ ನಿಷ್ಕ್ರೀಯತೆಯನ್ನು ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಯಿತು. ಹಿಂದೂ ಯುವಕರ ನಿರಂತರ ಹತ್ಯೆ ನಡೆಯುತ್ತಿದ್ದರೂ, ಸರಕಾರ ಆರೋಪಿಗಳನ್ನು ಬಂಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವನ್ನು ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮುಖಂಡರಿಂದ ಕೇಳಿ ಬಂತು.

ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ದಲ್ಲಿ ಕೂಡ ಸತ್ಯಾಗ್ರಹ ನಡೆಯಿತು.