UDUPI
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ- ಯಾವುದೇ ಚರ್ಚೆಗೆ ಸಿದ್ದ – ಪೇಜಾವರ ಶ್ರೀ
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ- ಯಾವುದೇ ಚರ್ಚೆಗೆ ಸಿದ್ದ – ಪೇಜಾವರ ಶ್ರೀ
ಉಡುಪಿ ಜನವರಿ 16: ವೀರಶೈವ- ಲಿಂಗಾಯತ ಧರ್ಮ ವಿಭಜನೆ ವಿಚಾರದ ಹಿನ್ನಲೆಯಲ್ಲಿ ಯಾವುದೇ ಚರ್ಚೆಗೆ ಕರೆದರೆ ನಾನು ಸಿದ್ದವಿದ್ದೇನೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಗಳು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ವೀರಶೈವ ಲಿಂಗಾಯತ ಧರ್ಮ ಎರಡು ಹಿಂದೂ ಧರ್ಮಕ್ಕೆ ಸೇರಿದ್ದು, ಹಿಂದೂ ಧರ್ಮದಿಂದ ಬೇರೆಯಾಗಬಾರದು ಎಂದು ಹೇಳಿದರು. ವೀರಶೈವ – ಲಿಂಗಾಯುತ ಧರ್ಮದವರೆಲ್ಲರೂ ಶಿವನ ಭಕ್ತರು, ಶಿವನು ಹಿಂದೂ ದೇವತೆ, ಹಿಂದೂ ದೇವತೆಯನ್ನು ಸ್ವೀಕಾರ ಮಾಡುವವರೆಲ್ಲಾ ಹಿಂದೂಗಳು ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಹಿಂದೂ ಧರ್ಮದ ವೇದ,ಜಾತಿ ವ್ಯವಸ್ಥೆ ಒಪ್ಪದಿದ್ರು ತೊಂದರೆಯಿಲ್ಲಾ ಆದರೆ ಹಿಂದೂ ಧರ್ಮದ ಒಳಗೆ ಎಲ್ಲರೂ ಐಕ್ಯ ಮತದಿಂದ ಬೆರೆಯೋಣ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
You must be logged in to post a comment Login