ಮಂಗಳೂರು, ಜುಲೈ.21:ಗಾಂಜಾ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಗಾಂಜಾವನ್ನು ಮಂಗಳೂರು ಸಿಸಿಬಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದ ಉಪ್ಪಳದಿಂದ ಮಂಗಳೂರಿಗೆ ಜಮಾಲ್ (35) ಎಂಬಾದ ತನ್ನ ದ್ವಿಚಕ್ರ ವಾಹನದಲ್ಲಿ ಸುಮಾರು ಎರಡು ಕೆ.ಜಿ ಗಾಂಜಾವನ್ನು ಮಂಗಳೂರಿಗೆ ಸಾಗಿಸುತ್ತಿದ್ದ ಮಾಹಿತಿ ಪಡೆದ ಸಿಸಿಬಿ ಪೋಲೀಸರು ತಲಪಾಡಿಯ ಚೆಕ್ ಪೋಸ್ಟ್ ಬಳಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಗಾಂಜಾದ ಜೊತೆಗೆ ಆರೋಪಿ ಬಳಸುತ್ತಿದ್ದ ಆಕ್ಟೀವ್ ಹೊಂಡಾ, ಮೊಬೈಲ್ ಸೇರಿದಂತೆ ಸುಮಾರು 1.15 ಲಕ್ಷದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನ ಗುರುಪುರ ನಿವಾಸಿಯಾಗಿರುವ ಆರೋಪಿ ಜಮಾಲ್ 2000 ನೇ ಇಸವಿಯಲ್ಲಿ ಕೆ.ಸಿ.ರೋಡ್ ನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಮಂಗಳೂರಿನಲ್ಲಿ ನಡೆದ ಪುತ್ತುಬಾವ ಕೊಲೆ ಪ್ರಕರಣ ಹಾಗೂ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಉಳ್ಳಾಲ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
21
Jul, 2017