ಮಂಗಳೂರು,ಜುಲೈ25:ರೌಡಿ ಶೀಟರ್ ಒಬ್ಬನನ್ನು ಕೊಚ್ಚಿ ಕೊಲೆಗೈದ ಘಟನೆ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ನಡೆದಿದೆ. ರೌಡಿ ಶೀಟರ್ ಆಗಿದ್ದ ವಾಮಂಜೂರು ರೋಹಿ ಮಗ ಪವನ್ ರಾಜ್ ಶೆಟ್ಟಿ(23) ಕೊಲೆಯಾದ ರೌಡಿಯಾಗಿದ್ದು, ಪೂರ್ವದ್ವೇಷವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ವಾಮಂಜೂರಿನ ಕುಟ್ಟಿಪಲ್ಕೆ ಲೇ ಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಪವನ್ ನನ್ನು ದುರ್ಷರ್ಮಿಗಳು ಲಾಂಗ್ ನಿಂದ ಕಡಿದು ಕೊಲೆ ಮಾಡಿದ್ದು,ಈ ಕೃತ್ಯ ನಿನ್ನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಸ್ಥಳೀಯರಿಗೆ ಈ ವಿಚಾರ ತಿಳಿದುಬಂದು, ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ತಂದೆ ವಾಮಂಜೂರು ರೋಹಿಯನ್ನು ಕೊಲೆಗೈದ ಆರೋಪಿಗಳನ್ನು ಮುಗಿಸುವ ಪ್ರತಿಜ್ಞೆ ಮಾಡಿದ್ದ ಪವನ್ ರಾಜ್ ಮೇಲೆ ಹಲವು ಪ್ರಕರಣಗಳೂ ದಾಖಲಾಗಿದೆ. ವಾಮಂಜೂರು ರೋಹಿ ಕೊಲೆಯತ್ನದಲ್ಲಿ ಭಾಗಿಯಾಗಿದ್ದರೆನ್ನಲಾದ ಜಯಪ್ರಕಾಶ್ ಕೊಲೆಯತ್ನ, ಸಂತೋಷ್ ಕೊಟ್ಟಾರೆ ಕೊಲೆಯತ್ನ ಹಾಗೂ ರೋಹಿ ಕೊಲೆಗೆ ಹಣಕಾಸಿನ ನೆರವು ನೀಡಿದ್ದರೆನ್ನಲಾದ ಒತ್ತುಪಾದೆ ರಹಮಾನ್ ಕೊಲೆಯತ್ನ ಹೀಗೆ ಹಲವು ಪ್ರಕರಣಗಳು ಪವನ್ ಮೇಲೆ ದಾಖಲಾಗಿದೆ.

ವಾಮಂಜೂರು ರೋಹಿ 

ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಪವನ್ ಇದೀಗ ಕೊಲೆಯಾಗಿದ್ದು, ಪೂರ್ವದ್ವೇಷವೇ ಕೊಲೆಗೆ ಕಾರಣವಾಗಿರುವ ಸಾಧ್ಯತೆಯು ಹೆಚ್ಚಾಗಿದೆ. ಪವನ್ ಕೊಲೆಗೀಡಾದ ಸ್ಥಳಕ್ಕೆ ಇದೀಗ ಡಿಸಿಪಿಗಳಾದ ಹನುಮಂತರಾಯ, ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ. ಪವನ್ ರಾಜ್ ನನ್ನು ಕೊಲೆ ಮಾಡಿ ಕೊಲೆಗಟುಕರು ತಮ್ಮ ಲಾಂಗ್ ಮಚ್ಚನ್ನು ಸ್ಥಳದಲ್ಲೇ ಬಿಟ್ಟುಹೋಗಿದ್ದಾರೆ.

ವಿಡಿಯೋ ನೋಡಲು ಈ ಕೆಳಗಿನ ಲಿಂಕನ್ನು ಒತ್ತಿರಿ.

Facebook Comments

comments