ಬೆಂಗಳೂರು, ಆಗಸ್ಟ್ 22 : ಪ್ರಜೆಗಳೇ ಪ್ರಭುಗಳು ಎನ್ನುವ ಅಂಶಗಳೊಂದಿಗೆ ರಾಜಕೀಯ ಪಕ್ಷಕ್ಕೆ ಅಡಿಪಾಯ ಹಾಕುತ್ತಿರುವ ಉಪೇಂದ್ರ ಅವರನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಂಬಲಿಸಿದ್ದಾರೆ. ಪ್ರಜಾ ಕಾರಣ ಪ್ರಜಾ ನೀತಿ ರಾಜಕೀಯ ವಿಚಾರಧಾರೆ ಗಳೊಂದಿಗೆ ರಾಜಕೀಯ ಪಕ್ಷ ಆರಂಭಿಸಲು ಹೊರಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಮುತಾಲಿಕ್ ಸಾಥ್ ನೀಡಿದ್ದಾರೆ .
ಬೆಂಗಳೂರಿನಲ್ಲಿ ಉಪೇಂದ್ರ ಅವರ ನಿವಾಸಕ್ಕೆ ತೆರಳಿದ ಪ್ರಮೋದ್ ಮುತಾಲಿಕ್ ಉಪೇಂದ್ರ ಅವರೆಗೆ ಅಭಿನಂದನೆ ಸಲ್ಲಿಸಿದರು. ಪ್ರಜಾ ಕಾರಣದ ಅಂಶಗಳನ್ನೊಳಗೊಂಡ ರಾಜಕೀಯ ಪಕ್ಷದ ಬಗ್ಗೆ ಉಪೇಂದ್ರ ಹಾಗೂ ಪ್ರಮೋದ್ ಮುತಾಲಿಕ್ ಅವರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು .ಪ್ರಜೆಗಳೇ ಪ್ರಭುಗಳು ಎನ್ನುವ ಅಂಶಗಳೊಂದಿಗೆ ರಾಜಕೀಯ ಪಕ್ಷಕ್ಕೆ ಅಡಿಪಾಯ ಹಾಕುತ್ತಿರುವ ಉಪೇಂದ್ರ ಅವರನ್ನು ಬೆಂಬಲಿಸುವುದಾಗಿ ಪ್ರಮೋದ್ ಮುತಾಲಿಕ್ ಹೇಲಿದ್ದಾರೆ. ಉಪೇಂದ್ರ ಹಾಗೂ ತಮ್ಮ ನಡುವೆ ನಡೆದ ಮಾತುಕತೆಯ ಬಗ್ಗೆ  ಮಾತನಾಡಿದ ಪ್ರಮೋದ್ ಮುತಾಲಿಕ್ ಉಪೇಂದ್ರ ಅವರು ಅವರ ದೃಷ್ಟಿಕೋನ ಉತ್ತಮವಾಗಿದ್ದು ಅವರ ಪಕ್ಷಕ್ಕೆ ಸಪೋರ್ಟ್ ಮಾಡುವುದಾಗಿ ಹೇಳಿದ್ದಾರೆ. ಉಪೇಂದ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದಾರೆ ಎಂಬುವುದು ಅವರ ಮಾತಿನಲ್ಲಿ ವ್ಯಕ್ತವಾಗಿದ್ದು ಶ್ರೀ ರಾಂ ಸೇನೆಯ ಧ್ಯೇಯವೂ ಇದೇ ಆಗಿದೆ ಈ ನಿಟ್ಟಿನಲ್ಲಿ ಶ್ರೀರಾಮ ಸೇನೆ ಅವರನ್ನು ಬೆಂಬಲಿಸುತ್ತದೆ ಎಂದು ಅವರು ತಿಳಿಸಿದರು. ಶ್ರೀರಾಮಸೇನೆ ಹಿಂದುತ್ವದ ಬದ್ಧತೆಯೊಂದಿಗೆ ಭ್ರಷ್ಟಾಚಾರ ಮುಕ್ತ ಸಮಾಜದ ಪರಿಕಲ್ಪನೆ ಇಟ್ಟುಕೊಂಡಿದೆ. ಉಪೇಂದ್ರ ಅವರ ದೃಷ್ಟಿಕೋನ ಹಾಗೂ ಶ್ರೀರಾಮ ಸೇನೆಯ ವಿಚಾರಧಾರೆಗೆ ಸಾಮ್ಯತೆ ಇದೆ ಎಂದು ಅವರು ಹೇಳಿದರು. ಪ್ರಜಾ ಪ್ರಭುತ್ವದ ಪರಿಕಲ್ಪಣೆಯಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು. ಹೊಲಸು ರಾಜಕೀಯ ತೊಲಗಿ ಪ್ರಜಾ ನೀತಿ ಬರಬೇಕು. ಹಣಬಲ, ತೋಳ್ಬಲ, ಅಸ್ಪ್ರಶ್ಯತೆ, ಜಾತಿ ವರ್ಗಗಳಿಂದ ಸಮಾಜ ಮುಕ್ತವಾಗಬೇಕು ಆಗ ಮಾತ್ರ ಉತ್ತಮ ಪ್ರಜಾ ರಾಜ್ಯ ನಿರ್ಮಾಣ ಸಾಧ್ಯ ಎನ್ನುವ ಅವರ ರಾಜಕೀಯ ವಿಚಾರಧಾರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿವಾರ್ಯ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು ಮುಂದಿನ ದಿನಗಳಲ್ಲಿ ಮತ್ತೆ ಉಪೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಅವರು ತಿಳಿಸಿದರು.