LATEST NEWS
ರಾಹುಲ್ ಉಳ್ಳಾಲ ಭೇಟಿ ಕಲ್ಲಾಪು ಬಳಿ ಜನಜಂಗುಳಿ : ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಮಾನತು
ರಾಹುಲ್ ಉಳ್ಳಾಲ ಭೇಟಿ ಕಲ್ಲಾಪು ಬಳಿ ಜನಜಂಗುಳಿ : ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಮಾನತು
ಮಂಗಳೂರು, ಮಾರ್ಚ್ 21 : ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಯುವರಾಜ ರಾಹುಲ್ ಗಾಂಧಿ ನಿನ್ನೆ ತಡ ರಾತ್ರಿ ಉಳ್ಳಾಲ ಭೇಟಿ ಸಂದರ್ಭದಲ್ಲಿ ಕಲ್ಲಾಪು,ಓವರ್ ಬ್ರಿಡ್ಜ್,ಬಳಿ ಸಾವಿರಾರು ಕಾರ್ಕರ್ತರು ಜಮಾಯಿಸಿದ್ದರು.
ರಾಹುಲ್ ಉಳ್ಳಾಲ ದರ್ಗಾ ಭೇಟಿಗೆ ಬರುವಾಗ ಸುಗಮ ಸಂಚಾರಕ್ಕಾಗಿ ಹೆದ್ದಾರಿಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಲಾಠಿ ಬೀಸಿ ತೆರವು ಗೊಳಿಸಲು ಮುಂದಾದರು.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲೀ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೋಲೀಸ್ ಸಿಬ್ಬಂದಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ತಳೀಯ ಯವಕರು ಪ್ರತಿಭಟನೆಗೆ ಮುಂದಾದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಸಚಿವ ಯು.ಟಿ. ಖಾದರ್ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮದ ಭರವಸೆ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲಿಸ್ ಕಮಿಷನರ್ ಪೋಲಿಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜತೆಗೆ ಡಿಸಿಪಿಗೆ ಶೋಕಾಸ್ ನೋಟೀಸು ಜಾರಿ ಮಾಡಲಾಗಿದೆ.
ಘಟನೆ ಕುರಿತ ಸಚಿವ ಯು.ಟಿ.ಖಾದರ್ ಮನವಿ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ.
You must be logged in to post a comment Login