LATEST NEWS
ರಾಜ್ಯದಲ್ಲಿ ಮದ್ಯ ನಿಷೇಧ ಯಾವುದೇ ಪ್ರಸ್ತಾಪ ಇಲ್ಲ – ಸಿಎಂ

ರಾಜ್ಯದಲ್ಲಿ ಮದ್ಯ ನಿಷೇಧ ಯಾವುದೇ ಪ್ರಸ್ತಾಪ ಇಲ್ಲ – ಸಿಎಂ
ರಾಜ್ಯ ದಲ್ಲಿ ಮದ್ಯ ನಿಷೇಧ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದರು, ಖಾಸಗಿ ವೈದ್ಯರ ಮುಷ್ಕರಕ್ಕೆ ಕಾರಣವಾಗಿರುವ ಕೆಪಿಎಂಐ ತಿದ್ದುಪಡಿ ಮಸೂದೆ ನಾಳೆ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದರು. ವೈದ್ಯರ ಹೋರಾಟದಲ್ಲಿ ಯಾರೂ ಸೋತಿಲ್ಲ , ಯಾರೂ ಗೆದ್ದಿಲ್ಲ, ಮಸೂದೆ ಜಾರಿಯಾದರೆ ಅದು ರಾಜ್ಯದ ಜನತೆಯ ಗೆಲುವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದಿರಾ ಕ್ಯಾಂಟೀನ್ ಕಳಪೆ ಗುಣಮಟ್ಟ ಅಕ್ಕಿ ಪೂರೈಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಒಟ್ಟಾರೆ ಆರೋಪವೇ ಸರಿಯಾದುದಲ್ಲ, ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ಸೇವಿಸಿದ ಗ್ರಾಹಕರಿಂದ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದರು.
