DAKSHINA KANNADA
ರಾಜಕೀಯ ಬದಿಗಿಡಿ, ಸಾಮರಸ್ಯಕ್ಕೆ ಕೈಜೋಡಿಸಿ: ಸಚಿವ ಯು.ಟಿ.ಖಾದರ್ ಮನವಿ
ರಾಜಕೀಯ ಮರೆತು ಸಾಮರಸ್ಯ ತರುವಲ್ಲಿ ಜನತೆ ಒಂದಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಜನತೆಗೆ ಮನವಿ ಮಾಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಶಾಂತಿ ಬಯಸುವ ಜನರಿಂದಾಗಿ ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದು, ಈಗ ಆ ಘಟನೆಗಳನ್ನು ಮರೆತು ಎಲ್ಲರೂ ಒಂದಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕಿದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ ಜನ ಜಾತಿ,ಮತ,ಧರ್ಮ ಮರೆತು ತನ್ನ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ಜಿಲ್ಲೆಯಿಂದ ಹೊರಗಿರುವ ಜನರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣವಿದೆ ಎನ್ನುವುದನ್ನು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ಸಾಮರಸ್ಯವನ್ನು ನೀವು ಕಣ್ಣಾರೆ ನೋಡಬೇಕೆಂದಿದ್ದರೆ ಮಂಗಳೂರಿನ ಮಾರುಕಟ್ಟೆಯನ್ನೊಮ್ಮೆ ತಿರುಗಿ ನೋಡಿ ಎಂದು ಸೂಚಿಸಿದ ಅವರು ಶಾಂತಿ ಹಾಗೂ ಅಶಾಂತಿ ಬಯಸುವವರ ನಡುವೆ ನಡೆಯುವ ಸಂಘರ್ಷದಲ್ಲಿ ಶಾಂತಿ ಬಯಸುವವರಿಗೆ ಜಯವಾಗಲಿದೆ ಎಂದರು. ಜಿಲ್ಲೆಯಲ್ಲಿ ನಡೆದಂತಹ ಘಟನೆಗಳನ್ನು ಒಂದು ಕೆಟ್ಟ ಘಳಿಗೆ ಎನ್ನುವುದನ್ನು ಮರೆತು ಬಿಡಿ ಎಂದು ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದರು.
You must be logged in to post a comment Login