Connect with us

LATEST NEWS

ರಮಾನಾಥ ರೈ ಗೆ ತಿರುಗೇಟು ನೀಡಿದ ನಟ ಜಗ್ಗೇಶ್

ರಮಾನಾಥ ರೈ ಗೆ ತಿರುಗೇಟು ನೀಡಿದ ನಟ ಜಗ್ಗೇಶ್

ಮಂಗಳೂರು ಡಿಸೆಂಬರ್ 28: ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯವೇ ಕಾರಣ ಎಂದು ಹೇಳಿಕೆ ನೀಡಿದ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಅಕಾಡೆಮಿಯ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯವೇ ಕಾರಣ ಹೇಳಿಕೆ ನೀಡಿದ್ದರು. ಮುಸ್ಲಿಂ ಸಮುದಾಯದ ಜನರ ಈ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು.

ಸಚಿವ ರಮಾನಾಥ ರೈ ಹೇಳಿಕೆ ಟ್ವೀಟರ್ ನಲ್ಲಿ ತಿರುಗೇಟು ನೀಡಿದ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್
” ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು, ಮುಸಲ್ಮಾನರಿಗಾದರೂ ವಿಧೇಯರಾಗಿ.. 5 ಬಾರಿ ನಮಾಜ್ ಶುರುಮಾಡಿ.. ಯಾವುದೇ ಕಾರಣಕ್ಕೂ ಹಿಂದೂಗಳ ಮತ ಕೇಳಬೇಡಿ… ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚೆನ್ನಾಗಿ ಬಾಳಿ ಎಂದು ಟ್ವೀಟ್ ಮಾಡಿದ್ದಾರೆ.

Advertisement
Click to comment

You must be logged in to post a comment Login

Leave a Reply