Connect with us

UDUPI

ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Share Information

ಉಡುಪಿ, ಆಗಸ್ಟ್ 8 :  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ  ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿಯಲ್ಲಿ ನಡೆದ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಪ್ರೊ.ಎಂ. ಆರ್ ಮಂಜುನಾಥ ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಜ್ಯೋತಿ ಹರೀಶ್, ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಅನಂತ ಪದ್ಮನಾಭ, ನಮ ತುಳುವೆರ್ ಸಂಚಾಲಕ ಮೋಹನ್, ಸುಕುಮಾರ್ ಮೋಹನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾದೇವಯ್ಯ ಇವರು ಉಪಸ್ಥಿತದ್ದರು. ಸಭಾ ಕಾರ್ಯಕ್ರಮದ ನಂತರ , ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ಸಮೂಹ ನೃತ್ಯ ರೂಪಕ, ಜನಪದ ಕಲಾ ಪ್ರದರ್ಶನ, ನಾಟಕ ಮತ್ತು ಕಥಾ ಕೀರ್ತನ ಕಾರ್ಯಕ್ರಮಗಳು ನೆರವೇರಿದವು.


Share Information
Advertisement
Click to comment

You must be logged in to post a comment Login

Leave a Reply