Connect with us

UDUPI

ಯುವಕರೇ ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳಿ : ಆನಂದ್ ಕುಂದರ್

ಉಡುಪಿ,ಆಗಸ್ಟ್ 31: ಯುವ ಸಮುದಾಯದಲ್ಲಿ ವಿಶೇಷವಾದ ಶಕ್ತಿ ಸಾಮಥ್ರ್ಯಗಳಿದ್ದು ಅವರು ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ತಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಲು ವೇದಿಕೆ ದೊರೆಯುತ್ತದೆ.  ಅವರು ಜೀವನದಲ್ಲಿ ಅಧ್ಬುತವಾದ ಯಶಸ್ಸನ್ನು ಸಾಧಿಸಬಹುದೆಂಬ ಖ್ಯಾತ ಉಧ್ಯಮಿ ಹಾಗೂ ಉಡುಪಿ ಜಿಲ್ಲಾ ಸ್ಕೌಟ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಆನಂದ ಸಿ.ಕುಂದರ್ ನುಡಿದರು.
ಅವರು ಮಣಿಪಾಲ ಪ್ರಗತಿನಗರದ ಡಾ.ವಿ.ಎಸ್ ಅಚಾರ್ಯ ಸ್ಕೌಟ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಬೆಂಗಳೂರು-ಮೈಸೂರು ವಿಭಾಗೀಯ ಮಟ್ಟದ ಪಯೋನಿಯರಿಂಗ್ ಮತ್ತು ಸಾಹಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಶಾಂತಾ ವಿ.ಎಸ್ ಅಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್ ಪ್ರಾಸ್ತಾವಿಕ ಮಾತನಾಡುತ್ತಾ 16 ಜಿಲ್ಲೆಗಳಿ0ದ 212 ರೋವರ್ಸ್ ಮತ್ತು ರೇಂಜರ್ಸ್ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆಂದು ತಿಳಿಸಿದರು.
ಜಿಲ್ಲಾ ಪದಾಧಿಕಾರಿಗಳಾದ ಎಡ್ಮಿನ್ ಅಳ್ವ, ಜ್ಯೋತಿ ಹೆಬ್ಬಾರ್, ಜ್ಯೋತಿ ಜೆ.ಪೈ, ಐಕೆ ಜಯಚ0ದ್ರ, ಶಿಬಿರಾಧಿಕಾರಿಗಳಾದ ಡೇನಿಯಲ್ ಸುಕುಮಾರ್, ಪ್ಲೋರಿನ ಡಿಸಿಲ್ವ ಸುಮನ್ ಶೇಖರ್, ಸಾವಿತ್ರಿ ಮನೊಹರ್ ಡಾ. ರವಿ ಎಂ ಎನ್, ಹಾಗೂ ಎಂ ಸುರೇಶ್, ಉಪಸ್ಥಿತರಿದ್ದರು.

Share Information
Advertisement
Click to comment

You must be logged in to post a comment Login

Leave a Reply