ಮಂಗಳೂರು ಅಗಸ್ಟ್ 05 :- ನಿಗೂಢವಾಗಿ ಸಾವನ್ನಪ್ಪಿದ ಅಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಮನೆಗೆ ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಭೇಟಿ ನೀಡಿದರು. ಕಾವ್ಯ ತಂದೆ ಲೋಕೇಶ ಹಾಗು ತಾಯಿ ಬೇಬಿ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಮೇಯರ್ ಕವಿತಾ ಸನೀಲ್ ಮಗಳನ್ನು ಕಳಕೊಂಡ ದುಖ: ತಾಯಿಗೆ ಮಾತ್ರ ಗೊತ್ತು, ಕಾವ್ಯ ತಂದೆ ತಾಯಿ ಯವರ ಹೇಳಿಕೆಗೂ ನಡೆದಿರುವ ಘಟನೆ ಸನ್ನಿವೇಶಕ್ಕೂ ತುಂಬಾ ವ್ಯತ್ಯಾಸವಿದೆ, ಕಾವ್ಯಳ ಕೊಲೆಯೋ ಅಥವಾ ಅತ್ಮಹತ್ಯೆಯೂ ಗೊತ್ತಿಲ್ಲ. ಆದರೆ ಸರಿಯಾದ ತನಿಖೆಯಿಂದ ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಸತ್ಯ ಏನೆಂಬುದು ಹೊರಬರಬೇಕು ಎಂದು ಹೇಳಿದರು. ಇಂತಹ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳಾದ ಕುಮಾರಿ ಅಪ್ಪಿ, ಸಬಿತಾ ಮಿಸ್ಕಿತ್ , ಕವಿತಾ ವಾಸು ,ರತಿಕಲಾ ,ಅಖಿಲಾ ಅಳ್ವ ಮತ್ತಿತರರು ಇದ್ದರು.

ಆಳ್ವಾಸ್ ವಿಧ್ಯಾರ್ಥಿನಿ ಕಾವ್ಯಾಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ – ತಾಯಿ ಬೇಬಿ ಪೂಜಾರಿ ಆರೋಪ