LATEST NEWS
ಮೂಡಬಿದಿರೆ ಕಂಬಳದಲ್ಲಿ ನಡೆದ ಹಿಂಸೆಯ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಪೆಟಾ

ಮೂಡಬಿದಿರೆ ಕಂಬಳದಲ್ಲಿ ನಡೆದ ಹಿಂಸೆಯ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಪೆಟಾ
ಮಂಗಳೂರು ನೆವಂಬರ್ 16: ಕರಾವಳಿಯ ಕಂಬಳದ ಬೆನ್ನ ಹಿಂದೆ ಬಿದ್ದಿರುವ ಪೆಟಾ ಮತ್ತೆ ತನ್ನ ಖ್ಯಾತೆ ತೆಗೆದಿದೆ. ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ವಿಜಯೋತ್ಸವ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದ್ದು ಅದಕ್ಕೆ ಸಂಬಂಧಿಸಿದ ವಿಡಿಯೋವನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಮೂಡಬಿದಿರೆ ಕಂಬಳವನ್ನು ಪೆಟಾ ತಂಡದವರು ಪೂರ್ತಿಯಾಗಿ ವಿಡಿಯೋ ಮತ್ತು ಪೋಟೋ ಮೂಲಕ ದಾಖಲಿಸಿಕೊಂಡಿದ್ದರು.
ಈ ವಿಡಿಯೋದಲ್ಲಿ ಕಂಬಳದಲ್ಲಿ ಕೋಣಗಳಿಗೆ ಹೊಡೆಯುತ್ತಿರುವ ದೃಶ್ಯಗಳಿದ್ದು , ಹಾಗೂ ಅವುಗಳ ಬಾಯಿಯಿಂದ ನೊರೆಯೂ ಬರುತ್ತಿರುವುದನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ ಕೆಲವೊಂದು ಕೋಣಗಳು ರೇಸ್ ನಲ್ಲಿ ಪಾಲ್ಗೊಳ್ಳಲು ಹಠ ಮಾಡುತ್ತಿದ್ದಾಗ ಅವುಗಳನ್ನು ಎಳೆದು ಹೊಡೆದು ಹಿಂಸಿಸುವುದು ಈ ವಿಡಿಯೋದಲ್ಲಿದೆ.

ಪ್ರಾಣಿ ಹಿಂಸೆ ತಡೆ ಕಾಯ್ದೆ (ಕರ್ನಾಟಕ ತಿದ್ದುಪಡಿ) ಸುಗ್ರಿವಾಜ್ಞೆಯನ್ನು ಅನೂರ್ಜಿತಗೊಳಿಸಬೇಕು ಎಂದು ಪೆಟಾದವರು ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ದಾವೆ ಹೂಡಿದ್ದು, ಈಗ ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಎತ್ತಿನಬಂಡಿ ಓಟ ಮತ್ತು ಕಂಬಳ ವಿರುದ್ದ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಪೆಟಾ ಅರ್ಜಿ ಸಲ್ಲಿಸಿದ್ದು ವಿಚಾರಣೆಗೆ ಸ್ವೀಕೃತಗೊಂಡಿದೆ.
ಈಗ ಪೆಟಾ ಬಿಡುಗೆಡೆ ಮಾಡಿರುವ ವಿಡಿಯೋವನ್ನು ಸುಪ್ರೀಂಕೋರ್ಟ್ ಗೆ ಕಂಬಳದಲ್ಲಿ ನಡೆದಿರುವ ಹಿಂಸೆಯ ಬಗ್ಗೆ ಪೆಟಾ ದಾಖಲೆಯಾಗಿ ನೀಡಲಿದೆ.
Video