ಮಂಗಳೂರು ಜುಲೈ 30 : ಮಾಹಾ ಮಾರಿ H1N1 ಖಾಯಿಲೆಗೆ ಬಾಣಂತಿ ಮಹಿಳೆ ಬಲಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ,ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯ ವೇಣೂರು ನಿವಾಸಿ ಪುಷ್ಪಾವತಿ ಕಳೆದ ಒಂದು ತಿಂಗಳಿನಿಂದ H1N1 ಖಾಯಿಲೆಗೆ ತುತ್ತಾಗಿದ್ದು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಎಂಟು ತಿಂಗಳ‌ ಗರ್ಭಿಣಿಯಾಗಿದ್ದ ಪುಷ್ಪಾವತಿ ಹೊಟ್ಟೆಯಲ್ಲಿದ್ದ ಮಗುವನ್ನು ಆಬಾರ್ಷನ್ ಮೂಲಕ ಹೊರತೆಗೆಯಲಾಗಿತ್ತು, ಆದ್ರೆ ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿ ಪುಷ್ಪಾವತಿ ಮೃತರಾಗಿದ್ದು ೨೫ ದಿನದ ಮಗು ಅನಾಥವಾಗಿದೆ, ಆದರೆ ಮಗು ಆರೋಗ್ಯವಾಗಿದ್ದು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಶುಶ್ರೂಷೆ ಯಲ್ಲಿದೆ,ವೇಣೂರು ಗ್ರಾಮ ಪಂಚಾಯತ್ ನಲ್ಲಿ ಡಾಟಾ ಎಡಿಟರ್ ಆಗಿದ್ದ ಪುಷ್ಪಾವತಿ ಗೆ H1N1 ಉಲ್ಬಣವಾಗಿ,ಶ್ವಾಸಕೋಶದಲ್ಲಿ ಸಮಸ್ಯೆಯೂ ಕಂಡುಬಂದಿತ್ತು, ಕಡು ಬಡತನದ ನಡುವೆಯೂ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಇದೀಗ ಬದುಕುಳಿಯದಿರೋದು ಕುಟುಂಬಿಕನ್ನು ದುಃಖಿತರನ್ನಾಗಿ ಮಾಡಿದೆ.