Connect with us

    DAKSHINA KANNADA

    ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಪೊಲೀಸರು – ಮೂರು ಮಂದಿ ಬಂಧನ

    ಮಂಗಳೂರು – ಜುಲೈ 19: ಅಕ್ರಮ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಮಸಾಜ್ ಪಾರ್ಲರ್ ಮೇಲೆ ದಾಳಿನಡೆಸಿದ ಪೊಲೀಸರು ಮೂರು ಮಂದಿ ಯುವಕರನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಬಿಜೈ ನಲ್ಲಿರುವ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಬರ್ಕೆ ಠಾಣೆಯ ಪೊಲೀಸರು ಆಟೋ ರಿಕ್ಷಾ ಚಾಲಕ ಅನ್ಸಾರ್, ಕೇರಳ ಮೂಲದ ಅಬ್ದುಲ್ ರಸೂಲ್, ಹಾಗು ವರುಣ್ ಎಂಬವರನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಪಾರ್ಲರ್ ಮಾಲಿಕ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಕಳೆದ ಕೆಲವು ದಿನಗಳ ಹಿಂದೆ ಅಕ್ರಮ ಮಸಾಜ್ ಪಾರ್ಲರ್ ಹಾಗು ಸ್ಕಿಲ್ ಗೇಮ್ ಮಳಿಗೆ ಗಳ ಮೇಲೆ ಮಂಗಳೂರು ಮೇಯರ್ ಕವಿತಾ ಸನೀಲ್ ಅವರು ಏಕಾ ಏಕಿ ದಾಳಿನಡೆಸಿದ್ದರು. ಈ ಸಂದರ್ಭದಲ್ಲಿ ಅಕ್ರಮ ಮಸಾಜ್ ಪಾರ್ಲರ್ ಹಾಗು ಸ್ಕಿಲ್ ಗೇಮ್ ಗಳಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿ ಗಳನ್ನು ಮೇಯರ್ ತರಾಟೆಗೆ ತೆಗೆದು ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಗ ದಾಳಿ ಆರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply