Connect with us

  UDUPI

  ಮಣಿಪಾಲ ಬಸ್ ನಿಲ್ದಾಣದ ಅವ್ಯವಸ್ಥೆ ಖಂಡಿಸಿ ವಿಶಿಷ್ಟ ರೀತಿಯ ಪ್ರತಿಭಟನೆ..

  ಉಡುಪಿ, ಅಗಸ್ಟ್ 08 : ಇದು ಈಜು ಕೊಳ ಅಲ್ಲಾ ಈ ವ್ಯಕ್ತಿ ಅಕಸ್ಮಾತ್ತಾಗಿ ಬಿದ್ದುದೂ ಅಲ್ಲ. ದೇಶ ವಿದೇಶದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲದ ಬಸ್ ನಿಲ್ದಾಣ. ಎಜ್ಯುಕೇಶನ್ ಹಬ್ ಎಂದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಜನಿತವಾಗಿರುವ ಈ ಮಣಿಪಾಲದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದರೂ ಜಿಲ್ಲಾಡಳಿತ,ನಗರಸಭೆ ಅಥವಾ ಯಾವುದೇ ಪ್ರತಿನಿಧಿಗಳ  ಕಣ್ಣಿಗೆ ಇದು  ಕಾಣಿಸುವುದೇ ಇಲ್ಲ. ಇದರಿಂದ ರೋಸಿ ಹೋದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದರೂ ನೋ ಯೂಸ್. ಆದರಿಂದ ಸಮಾಜಸೇವಕ ನಿತ್ಯಾನಂದ ಒಳಕಾಡು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದರು. ಮಣಿಪಾಲದ ಬಸ್ ನಿಲ್ದಾಣದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಒಳಕಾಡು ಈಜುಕೊಳದಂತಾಗಿರುವ ಬಸ್ ನಿಲ್ದಾಣದ ನೀರಿನಲ್ಲಿ ಈಜಿದರು..!ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಪ್ರತಿಭಟನೆಗೆ ಸಾರ್ವಜನಿಕರು ಬೆಂಬಲ ನೀಡಿದರು. ಈ ಅಂತಾರಾಷ್ಟ್ರೀಯ ಖ್ಯಾತಿಯ ಶೈಕ್ಷಣಿಕ ಕೇಂದ್ರ ಮಣಿಪಾಲ ರಸ್ತೆ ದುರವಸ್ಥೆಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply