Connect with us

  DAKSHINA KANNADA

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ – ವಿಮಾನ‌ ಟೆಕ್ನೀಷಿಯನ್ ಬಂಧನ

  ಮಂಗಳೂರು ಜುಲೈ 25 : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಅಕ್ರಮ ಚಟುವಟಿಕೆಯಲ್ಲಿ ವಿಮಾನದ ಟೆಕ್ನಿಷಿಯನ್ ಬಾಗಿಯಾಗಿದ್ದಾನೆ. ಜೆಟ್ ಏರ್ ವೇಸ್ ಮೂಲಕ ಚಿನ್ನ ಸಾಗಾಟದಲ್ಲಿ ವಿಮಾನದ ಟೆಕ್ನಿಷಿಯನ್ ಲಾಲ್ ಬಿನ್ ಜೀನ್ ಅವರನ್ನು ಕಸ್ಟಮ್ಸ್ ಇಲಾಖೆಯ ಡಿಆರ್ ಐ ವಿಭಾಗ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 34 ಲಕ್ಷ ಮೌಲ್ಯದ 1 ಕೆಜಿ 160 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆಯೂ ಕೂಡ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣವನ್ನು ಡಿಆರ್ ಐ ಅಧಿಕಾರಿಗಳು ಭೇದಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ವಿಮಾನದ ಟೆಕ್ನಿಷಿಯನ್ ಒಬ್ಬ ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

  Share Information
  Advertisement
  Click to comment

  You must be logged in to post a comment Login

  Leave a Reply