Connect with us

DAKSHINA KANNADA

ಮಂಗಳೂರಿನಲ್ಲಿ ಕಾರ್ಟಿಂಗ್ ಕಾರುಗಳ ಕಾರುಬಾರು..

Share Information

ಮಂಗಳೂರು, ಅಗಸ್ಟ್ 25: ಕೇವಲ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾತ್ರವಿದ್ದ ಕಾರ್ಟಿಂಗ್ ಕ್ರೀಡೆ ಮಂಗಳೂರಿಗೂ ಈಗ ಕಾಲಿಟ್ಟಿದೆ. ಮಂಗಳೂರು ನಗರದ  ಹೊರವಲಯದ ಕಣ್ಣೂರು ಎಂಬಲ್ಲಿ ಕಾರ್ಟಿಂಗ್ ಟ್ರ್ಯಾಕ್ ಸಿದ್ಧಗೊಂಡಿದ್ದು ಈಗ ರೂಮ್ ರೂಮ್ ಎಂದು ಕಾರ್ಟಿಂಗ್ ಪುಟ್ಟ ವಾಹನಗಳು ಸದ್ದು ಮಾಡುತ್ತಿದೆ.

ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಸಚಿವ ಯುಟಿ ಖಾದರ್ ಕಾರ್ಟಿಂಗ್ ರೇಸ್ ಮಾಡುವ ಮೂಲಕ ಜನರ ಮನಸ್ಸನ್ನು ಸೆಳೆದರು. ಕೆಫೆ ಕಾರ್ಟಿಂಗ್ ಎಂಬ ಮಂಗಳೂರು ಮೂಲದ ಸಂಸ್ಥೆ ಈ ಕ್ರೀಡೆಯನ್ನು ಮಂಗಳೂರಿಗೆ ತರುವಲ್ಲಿ ಯಶಸ್ವಿಯಾಗಿದೆ. ಕಾರ್ಟಿಂಗ್ ಪ್ರಿಯರು ನಗರದಲ್ಲಿ ಯಾವುದೇ ಕಾರ್ಟಿಂಗ್ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಮುಂಬೈ, ಚೆನ್ನೈ, ಹಾಗೂ ಬೆಂಗಳೂರಿಗೆ ಹೋಗಿ ಕಾರ್ಟಿಂಗ್ ರೇಸ್ ಮಾಡುತ್ತಿದ್ದರು. ಕಾರ್ಟಿಂಗ್ ಪ್ರಿಯರ ಮನದಿಂಗಿತವನ್ನರಿತ ಕೆಫೆ ಕಾರ್ಟಿಂಗ್ ಸಂಸ್ಥೆ ಈ ಕ್ರೀಡೆಯನ್ನು ಪ್ರಪ್ರಥಮ ಬಾರಿಗೆ ಮಂಗಳೂರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿರುವ ಕಾರ್ಟ್ ಗಳು ವಿಭಿನ್ನ ವೇಗದಲ್ಲಿ ಚಲಿಸುತ್ತವೆ. ಕೆಲವು ಸೂಪರ್ ಕಾರ್ಟ್ ಗಳು ಗಂಟೆಗೆ ೧೬೦ ಕಿಲೋಮೀಟರ್
ನಿಂದ  ೨೦೦  ಕಿಲೋಮೀಟರ್  ಹೆಚ್ಚಿನ ವೇಗ ತಲುಪಬಲ್ಲದು.  ಕಾರ್ ರೇಸಿಂಗ್ ಅಥವಾ ಫಾರ್ಮುಲಾ ಒನ್ ರೇಸ್ ಗೆ ಸಿದ್ಧತೆಗೆ ಈ ಕಾರ್ಟಗಳು ಮೊದಲ ಮೆಟ್ಟಿಲು ಎಂದೂ ಹೇಳಬಹುದು. ಶ್ರೀಮಂತರ ಕ್ರೀಡೆ ಅನ್ನು ಹಣೆಪಟ್ಟಿ ಈ ಕಾರ್ಟ ಇದ್ದರೂ ಮಂಗಳೂರಿನಲ್ಲಿ ಕೇವಲ 100 ರೂಪಾಯಿಗೆ ಒಂದು ಗಂಟೆ ಕಾರ್ಟ್ ಒಡಿಸಬಹುದಾಗಿದೆ.


Share Information
Advertisement
Click to comment

You must be logged in to post a comment Login

Leave a Reply