ಪುತ್ತೂರು,ಜುಲೈ.20. ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಪುತ್ತೂರಿನ ಬೊಳವಾರಿನಲ್ಲಿ ತಡೆಗೋಡೆಯೊಂದು ಜರಿದ ಪರಿಣಾಮ ಮನೆಯೊಂದು ಅಪಾಯದಲ್ಲಿದೆ.

ನಾರಾಯಣ ಮಣಿಯಾಣಿ ಎಂಬವರಿಗೆ ಸೇರಿದ ಮನೆಯಾಗಿದ್ದು, ಮನೆಯ ತಳಭಾಗದಲ್ಲಿ ಕಟ್ಟಿದ ತಡೆಗೋಡೆ ಭಾರಿ ಮಳೆಯ ಕಾರಣ ಭಾಗಶ ಕುಸಿದಿದ್ದು,ಅಪಾಯದ ಅಂಚಿನಲ್ಲಿದೆ. ಸ್ಥಳಕ್ಕೆ ಸ್ತಳೀಯಾಡಳಿತದ ಅಧಿಕಾರಿಗಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.