Connect with us

UDUPI

ಬ್ರಹ್ಮಾವರದಲ್ಲಿ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟ ಪೂರ್ವಭಾವಿ ಸಭೆ

Share Information

ಉಡುಪಿ,ಆಗಸ್ಟ್ 29: ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ಎಸ್.ಎಂ.ಎಸ್ ಪದವಿಪೂರ್ವ ಕಾಲೇಜು ಬ್ರಹ್ಮಾವರದಲ್ಲಿ ಆಯೋಜಿಸುವ ಸಂಬಂಧ ಇಂದು ಕಾಲೇಜಿನಲ್ಲಿ ಸಭೆ ನಡೆಸಲಾಯಿತು.
ನವೆಂಬರ್ 15-20 ರೊಳಗಿನ ದಿನಾಂಕದಲ್ಲಿ ಕ್ರೀಡಾಕೂಟವನ್ನು ನಡೆಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೆ ಶೀಲಾ ಶೆಟ್ಟಿ ಅವರು ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆ ಸತ್ಸಂಪ್ರದಾಯ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಸುವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಯಾಗಲಿ ಕ್ರೀಡೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಪಾಲ್ಗೊಂಡ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಡುಪಿಯ ಕ್ರೀಡಾಕೂಟ ಅವಿಸ್ಮರಣೀಯ ನೆನಪಾಗಿರಲಿ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಅವರು ನೀಡಿದರು. ಸಭೆಯಲ್ಲಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು, ಆಯೋಜಕರು ನೀಡಿದ ವರದಿಯಲ್ಲಿ ಸಮಗ್ರತೆ ಇದ್ದು ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವ ಮುನ್ಸೂಚನೆ ಇದೆ. ಖರ್ಚು ವೆಚ್ಚದ ವರದಿಯಲ್ಲಿ ನಿವಾರಿಸಬಹುದಾದ ನಿವಾರಿಸಲಾಗದ  ಪಟ್ಟಿಯನ್ನು ಇನ್ನೊಮ್ಮೆ ಸಿದ್ದಪಡಿಸಿ ಎಂದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಸರ್ವಸಹಕಾರದ ಭರವಸೆಯನ್ನು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರು, ವಿದ್ಯಾರ್ಥಿಗಳ ಸುರಕ್ಷೆಗೆ ಪೂರಕವಾಗುವ ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವ ಹೊಣೆ ಪೊಲೀಸ್ ಇಲಾಖೆಯದ್ದು, ಆಯೋಜಕರು ವಿದ್ಯಾರ್ಥಿಗಳು ತಂಗುವ ಹಾಗೂ ಭಾಗವಹಿಸುವ ಕುರಿತ ಸಮಗ್ರ ಮಾಹಿತಿಯನ್ನು ನೀಡಿ ಎಂದರು. ಸಭೆಯಲ್ಲಿ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಾರಂಬಳ್ಳಿ ಪಂಚಾಯತ್ ಅಧ್ಯಕ್ಷ ನವೀನ್ ನಾಯಕ್, ಶಿಕ್ಷಣ ಸಂಸ್ಥೆಯ ಫಾ. ಸಿ ಎ ಐಸಾಕ್, ಡಿಡಿಪಿಯು ವಿಜಯಲಕ್ಷ್ಮಿ, ಕಾಲೇಜು ಪ್ರಾಂಶುಪಾಲರಾದ ಐವಾನ್ ಡಿಸೋಜ, ಉಪತಹಸೀಲ್ದಾರ್ ರಾಘವೇಂದ್ರ ನಾಯಕ್, ಡಿಡಿಪಿಐ ಶೇಖರ್ ವೇದಿಕೆಯಲ್ಲಿದ್ದರು.


Share Information
Advertisement
Click to comment

You must be logged in to post a comment Login

Leave a Reply