ಬೆಳ್ತಂಗಡಿ,ಅಗಸ್ಟ್ 11:ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪಂರ್ದ ಎಂಬಲ್ಲಿನ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿ ಬದುಕು ಸಾಗಿಸುತ್ತಿರುವ ಸಹೋದರಿಯರಲ್ಲಿ ಹಿರಿಯಾಕೆಯಾದ ಪುಷ್ಪರವರಿಗೆ ಕಂಕಣ ಭಾಗ್ಯವೇನೊ ಕೂಡಿ ಬಂತು. ಆದರೆ ಕೈಯಲ್ಲಿ ಕಾಂಚಣ ಮರಿಚೀಕೆಯಾದ ಆ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮುಖಾಂತರ ಇವರ ಬವಣೆಯನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಬಾರ್ಯದ ಮಂಜುನಾಥ್ ಸಾಲಿಯಾನ್ ಬಿರ್ವೆರ್ ಜವನೆರ್ ಮಸ್ಕತ್ ಸಂಘಟನೆಗೆ ನೆರವಾಗುವಂತೆ ಕೋರಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಸಂಘಟನೆಯ ಸದಸ್ಯರು ತಾವು ದುಡಿದ ಒಂದಂಶವನ್ನು ಕೂಡಿಟ್ಟು ಹೀಲ್ಸ್ ಸಂಸ್ಥೆ ಮಂಗಳೂರು ಮುಖಾಂತರ ಕುಮಾರಿ ಪುಷ್ಪರವರಿಗೆ ಸಹಾಯದ ಹಸ್ತ ಚಾಚಿದ್ದಾರೆ.

ಬಿರುವೆರ್ ಜವನೆರ್ ಮಸ್ಕತ್ ಬಿಸಿಲ ನಾಡಿನಲ್ಲಿ ತಮ್ಮೆಲ್ಲ ಕಷ್ಟಗಳ ಮಧ್ಯೆಯು ರಕ್ತಧಾನ ಶಿಬಿರ, ಶಿಕ್ಷಣ ಸಹಾಯ, ಆರೋಗ್ಯ ಸಹಾಯ ಮೊದಲಾದ ಹಲವು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಸಂಘಟನೆಯಾಗಿದೆ. ಬಿರುವೆರ್ ಜವನೆರ್ ಮಸ್ಕತ್ ಪ್ರತಿನಿಧಿ ಗಂಗಾಧರ್ ಪೂಜಾರಿ, ಹೀಲ್ಸ್ ಸಂಸ್ಥೆ ಉಪಾಧ್ಯಕ್ಷರಾದ ಶ್ರೀ ಅಜಿತ್ ಪೂಜಾರಿ ಸದಸ್ಯರಾದ ಸುಧಾಕರ್ ಬಂಗೇರ, ಕೋಶಾಧಿಕಾರಿಯಾದ ಶೈಲೇಶ್ ಮತ್ತು ಮಂಜುನಾಥ್ ಸಾಲಿಯಾನ್ ಮೊದಲಾದವರು ಬಾರ್ಯದ ಅನಾಥ ಸಹೋದರಿಯರ ಮನೆಗೆ ತೆರಳಿ 35,000 ಸಾವಿರದ ಚೆಕ್ ನ್ನು ನೀಡುವ ಮೂಲಕ ಬಡ ಸಹೋದರಿಯ ಕಂಕಣ ಭಾಗ್ಯಕ್ಕಾಗಿ ನೆರವಾಗಿದ್ದಾರೆ.

0 Shares

Facebook Comments

comments