ಪುತ್ತೂರು,ಜುಲೈ.21 : ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದ್ದ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಪ್ರಕರಣದ ಸಿಸಿ ಟಿವಿ ದೃಶ್ಯ ಲಭಿಸಿದೆ. ಕಳೆದ ಭಾನುವಾರ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಬಿಜೆಪಿ ಯುವ ಮುಂದಾಳು ರಮೇಶ್‌ ಕಲ್ಪುರೆ ಮೇಲೆ ಹಾಡಹಗಲೇ ಹಲ್ಲೆ ನಡೆಸಲಾಗಿತ್ತು.

ಇವರು ಅಂಗಡಿಯಿಂದ ಖರೀದಿಸಿದ ವಸ್ತುಗಳನ್ನು ತನ್ನ ಜೀಪಿಗೆ ತುಂಬಿಸುತ್ತಿದ್ದ ವೇಳೆ ತಂಡವೊಂದು ದಾಳಿ ನಡೆಸಿತು. ಈ ವೇಳೆ ಅಲ್ಲಿದ್ದ ಸ್ಥಳೀಯರು ಜಮಾಯಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿತ್ತು.ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ದಾಳಿಯ ಸಿಸಿ ಟಿವಿ ದೃಶ್ಯವಳಿಗಳು ಲಭಿಸಿದ್ದುಮ ವೈರಲ್ ಆಗಿವೆ..
ದೃಶ್ಯವಳಿಗಾಗಿ ಈ ಕೆಳಗಿನ ವಿಡಿಯೋ ಲಿಂಕನ್ನು ಒತ್ತಿರಿ…

https://youtu.be/CZ1GLlZ8NY4

Share Information