ಮಂಗಳೂರು ಅಗಸ್ಟ್ 13: ಮಂಗಳೂರು ವಿಶ್ವವಿದ್ಯಾನಿಲಯದ ಬಿ ಸಿ ಎ ಕನ್ನಡ ಪಠ್ಯ ಪುಸ್ತಕದಲ್ಲಿ ಪ್ರಕಟಿಸಿದ್ದ ಬರಗೂರು ರಾಮಚಂದ್ರಪ್ಪ ಅವರ ವಿವಾದಿತ ಗದ್ಯವನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ.


ಬರಗೂರರ ಯುದ್ಧ ಒಂದು ಉದ್ಯಮ ಎಂಬ ಗದ್ಯದಲ್ಲಿ ಸೈನಿಕರನ್ನು ಅವಹೇಳನ ಮಾಡಲಾಗಿದೆ ಎಂದು ವಿವಾದ ಸೃಷ್ಟಿಯಾಗಿತ್ತು .ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರಿಂದ ವಿವಾದಿತ ಗದ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು .

ವಿಶ್ವ ವಿದ್ಯಾನಿಲಯದ ಪಠ್ಯ ಪುಸ್ತಕದ ರಚನಾ ಸಮಿತಿ ಇಂದು ಸಭೆ ಸೇರಿ ವಿವಾದಿತಿ ಗದ್ಯವನ್ನು ತೆಗೆದು ಹಾಕಲು ನಿರ್ಧರಿಸಿವೆ ಎಂದು ಪಠ್ಯ ಪುಸ್ತಕದ ಪ್ರಧಾನ ಸಂಪಾದಕ ಪ್ರೋ. ಬಿ. ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ವಿವಾದಿತ ಗದ್ಯವನ್ನು ಪಠ್ಯಕ್ರಮದಿಂದ ತೆಗೆದು ಹಾಕಲು ನಿರ್ಧರಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಯ ಪದ ಚಿತ್ತಾರ ಕನ್ನಡ ಪಠ್ಯ ಪುಸ್ತಕದಲ್ಲಿ ಈ ವಿವಾದಿತ ಗದ್ಯ ಅಳವಡಿಸಲಾಗಿತ್ತು . ಈ ವಿವಾದಿತ ಗದ್ಯದ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾಗಿತ್ತು. ವಿದ್ಯಾರ್ಥಿ ಸಮುದಾಯ ಕೂಡ ಬೀದಿಗಿಳಿದು ಹೋರಾಟ ಆರಂಭಿಸಿತ್ತು .