Connect with us

  DAKSHINA KANNADA

  ಬಕ್ರೀದ್ ನ ಸರಕಾರಿ ರಜೆಯನ್ನು ಬದಲಿಸಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹ

  ಮಂಗಳೂರು ಅಗಸ್ಟ್ 24: ಮುಸ್ಲಿಂ ಸಮುದಾಯದ ಧಾರ್ಮಿಕ ಹಬ್ಬ ಬಕ್ರೀದ್ ಗೆ ಸರಕಾರದ ರಜೆ ಸೆಪ್ಟೆಂಬರ್ 2 ರಂದು ಇದ್ದು . ಅದನ್ನು ಬದಲಿಸಿ ಸೆಪ್ಟೆಂಬರ್ 1 ರಂದು ರಜೆ ಘೋಷಿಸಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

  ಕರಾವಳಿಯಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಹಬ್ಬ ಬಕ್ರೀದ್ ಆಚರಣೆಯ ಚಂದ್ರದರ್ಶನದ ಆಧಾರದಲ್ಲಿ ಇದೇ ಸೆಪ್ಟೆಂಬರ್ 1 ರಂದು ಎಂಗು ಮುಸ್ಲಿಂ ಧಾರ್ಮಿಕ ಮುಖಂಡರು ನಿರ್ಧರಿಸಿದ್ದಾರೆ.

  ಈ ಹಿನ್ನಲೆಯಲ್ಲಿ ಎಲ್ಲಾ ಮುಸ್ಲಿಂ ಭಾಂದವರು ಈ ದಿವಸ ಬಕ್ರೀದ್ ಹಬ್ಬವನ್ನು ಆಚರಿಸುವುದರಿಂದ ಸಾರ್ವಜನಿಕರಿಗೆ, ಸರಕಾರಿ ಹಾಗೂ ವಿಧ್ಯಾರ್ಥಿಗಳಿಗೆ ದಿನಾಂಕ ಸೆಪ್ಟೆಂಬರ್ 2 ರಂದು ರಜೆ ನಿಗದಿಯಾಗಿರುವುದು ಹಬ್ಬವನ್ನು ಆಚರಿಸಲು ಅನಾನುಕೂಲವಾಗಲಿದೆ.

  ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಬಕ್ರೀದ್ ನ ಸರಕಾರಿ ರಜೆಯನ್ನು ಒಂದು ದಿನಕ್ಕೆ ಪೂರ್ವೀಕರಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಅವರ ನೇತೃತ್ವದಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply