LATEST NEWS
ಉಡುಪಿಯಲ್ಲಿ ‘ಪ್ರಶಾಂತ’ ಮಡಿವಾಳ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ..
ಉಡುಪಿ, ಆಗಸ್ಟ್ 19 : ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತರ ಪಟ್ಟಿಯಲ್ಲಿ ಅಶೋಕ್ ಪೂಜಾರಿ ಎಂಬ ಬದುಕ್ಕಿದ್ದವನ ಹೆಸರು ಸೇರಿಸಿ ಪೇಚಿಗೀಡಾದ ಬಿಜೆಪಿ ಈಗ ಮತ್ತೊಮ್ಮೆ ಅಪಹಾಸ್ಯಕ್ಕೊಳಗಾಗಿದೆ. ಉಡುಪಿಯಲ್ಲಿ ಶರತ್ ಮಡಿವಾಳ ಹತ್ಯೆ ಗೈದ ಪಿಎಫ್ ಐ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು. ಸಚಿವ ರಮಾನಾಥ ರೈ ರಾಜಿನಾಮೆಗೆ ಆಗ್ರಹಿಸುವ ಸಲುವಾಗಿ ಪ್ರತಿಭಟನೆ ನಡೆದಿತ್ತು. ಆದ್ರೆ ಪ್ರತಿಭಟನಾಕಾರರು ಹಿಡಿದ ಬ್ಯಾನರ್ ಕಂಡು ಜನ ಗಾಬರಿ ಬಿದ್ರು. ಶರತ್ ಮಡಿವಾಳ ಎಂದು ಬರೆಯುವ ಬದಲಾಗಿ ಪ್ರಶಾಂತ ಮಡಿವಾಳ ಎಂದು ಬರೆಯಲಾಗಿತ್ತು. ಪ್ರತಿಭಟನೆ ಮುಗಿಯುವವರೆಗೂ ಈ ಅಚಾತುರ್ಯ ಬಿಜೆಪಿ ಪಕ್ಷದ ಕಾರ್ಯಕರ್ತರ ಗಮನಕ್ಕೆ ಬಂದಿಲ್ಲ. ಮತ್ತು ಇದರ ಬಗ್ಗೆ ಕಾಂಗ್ರೆಸ್ ಗೂ ಮಾತನಾಡುವ ಅಥವಾ ಗೇಲಿ ಮಾಡುವ ಅಧಿಕಾರವಿಲ್ಲ. ಕಾರಣ 2012 ರಲ್ಲಿ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕರುಗಳು ಬ್ಲೂ ಫಿಲ್ಮ್ ವೀಕ್ಷಣೆ ಮಾಡಿ ವಿಧಾನ ಸೌಧ ಅಪವಿತ್ರ ಮಾಡಿದ್ದಾರೆ ಎಂದು ಆರೋಪಿಸಿ ಆಗಿನ ಕಾಂಗ್ರೆಸ್ ಯುವ ನೇತಾರ, ಈಗಿನ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ವಿಧಾನ ಸೌಧ ವನ್ನು ಹಾಲಿನಿಂದ ತೊಳೆಯುವ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಆದರೆ ಪ್ರತಿಭಟನೆಯ ತರಾತುರಿಯಲ್ಲಿ ಬೆಂಗಳೂರಿನ ವಿಧಾನ ಸೌಧದ ಬದಲು ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಇದ್ದ ಬ್ಯಾನರ್ ಹಾಕಿ ಎಡವಟ್ಟು ಮಾಡಿಕೊಂಡಿದ್ದರು.
You must be logged in to post a comment Login