ರೌಡಿ ಶೀಟರ್ ಹ್ಯಾರೀಸ

ಮಂಗಳೂರು,ಜುಲೈ21: ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಪೋಲೀಸ್ ಮೇಲೆ ಇಂಥ ರೌಡಿಗಳಿಗೆ ಭಯ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಇದು ಮಂಗಳೂರಿನಲ್ಲಿ ಘಟನೆಯೊಂದು ನಡೆದಿದೆ. ಎಎಸ್ಐ ಒಬ್ಬರ ಮೇಲೆ ರೌಡಿಯೋರ್ವ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ್ದು, ರೌಡಿಶೀಟರ್ ಹ್ಯಾರಿಸ್ ಈ ಕೃತ್ಯ ಎಸಗಿದ್ದಾನೆ. ಈ ಅಪಘಾತದಲ್ಲಿ ಪಣಂಬೂರು ಠಾಣೆ ಎಎಸ್ಐ ಪುರಂದರ ಗೌಡ ಗಾಯಗೊಂಡಿದ್ದಾರೆ. ದರೋಡೆಗೆ ಸಂಚು ರೂಪಿಸಿದ್ದ ವಿಚಾರ ತಿಳಿದ ಪಣಂಬೂರು ಪೊಲೀಸರು ಎರಡು ತಂಡಗಳಾಗಿ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ರೌಡಿಶೀಡರ್ ಹ್ಯಾರೀಸ್ ನನ್ನು ಹಿಡಿಯಲು ಹೊಂಚು ಹಾಕಿದ್ದರು. ಈ ವೇಳೆ ಸಾಗಿಬಂದ ಹ್ಯಾರಿಸ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆತ ನೇರವಾಗಿ ಎಎಸ್ಐಗೆ ಮೇಲೆ ಕಾರನ್ನು ಹಾಯಿಸಲು ಯತ್ನಿಸಿದ್ದಾನೆ.ಹದಿನೈದಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಹ್ಯಾರಿಸ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ. ಪುರಂದರ ಗೌಡ ಅಪಾಯದಿಂದ ಪಾರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Facebook Comments

comments