Connect with us

DAKSHINA KANNADA

ಪೋಲೀಸ್ ನೋಟೀಸ್ ಗೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಉತ್ತರಿಸುವೆ, ವಜ್ರದೇಹಿ ಸ್ವಾಮೀಜಿ.

photoಜುಲೈ 4 ರಂದು ಬಿ.ಸಿ.ರೋಡ್ ನಲ್ಲಿ ನಡೆದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಸಂಬಂಧಿ ಸ್ಪೋಟಕ ಮಾಹಿತಿ ತನ್ನಲ್ಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗೆ ಬಂಟ್ವಾಳ ಪೋಲೀಸರು ನೋಟೀಸ್ ಜಾರಿ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ ಈ ಬಗ್ಗೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಉತ್ತರಿಸುವ ಎಂದಿದ್ದಾರೆ. ಡಿವೈಎಸ್ಪಿ ಗಣಪತಿ ಸಾವಿನ ಕುರಿತು ವಿಡಿಯೋ ಸಾಕ್ಷಿ ಇದ್ದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ವಿಫಲವಾಗಿರುವ ಹಿನ್ನಲೆಯಲ್ಲಿ ಶರತ್ ಹತ್ಯೆಯ ಕುರಿತು ತನ್ನಲ್ಲಿರುವ ಮಾಹಿತಿಯನ್ನು ರಾಜ್ಯ ಪೋಲೀಸರಿಗೆ ನೀಡುವುದು ಸೂಕ್ತವಲ್ಲ ಎಂದಿರುವ ಸ್ವಾಮೀಜಿ ರಾಷ್ಟ್ರೀಯ ತನಿಖಾ ದಳದ ಮುಂದೆಯೇ ತನ್ನ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Facebook Comments

comments