ಉಡುಪಿ, ಆಗಸ್ಟ್ 2: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಹಿರಿಯ ನಾಗರೀಕರ ಸಂಸ್ಥೆ (ರಿ), ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ , ಹಿರಿಯ ನಾಗರೀಕರ ಸಂಸ್ಥೆ (ರಿ), ಉಡುಪಿ ಇಲ್ಲಿ ” ನೀವು ಒಬ್ಬಂಟಿಯಲ್ಲ ” ಎಂಬ ಧ್ಯೇಯವಾಕ್ಯದೊಂದಿಗೆ ಹಿರಿಯ ನಾಗರೀಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಕಾರ್ಯಕ್ರಮವನ್ನು ಉದ್ಪಾಟಿಸಿ ಧ್ಯೇಯವಾಕ್ಯದ ಔಚಿತ್ಯದ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎ.ಪಿ.ಕೊಡಂಚ ಇವರು ಧ್ಯೇಯವಾಕ್ಯದ ಬಗ್ಗೆ ಹಿರಿಯ ನಾಗರೀಕರಿಗೆ ಮನವರಿಕೆಯನ್ನು ಮೂಡಿಸಿ ಮಾತನಾಡುತ್ತಾ ಹಿರಿಯ ನಾಗರೀಕರೊಂದಿಗೆ ಕಾನೂನು, ಆರೋಗ್ಯ, ರಕ್ಷಣೆ, ಸಂಚಾರ, ಆರ್ಥಿಕ ಭದ್ರತೆ ಮುಂತಾದ ಸೇವೆಗಳನ್ನು ನೀಡುವುದರ ಮೂಲಕ ಇಲಾಖೆ ಹಿರಿಯ ನಾಗರೀಕರ ಒಂಟಿತನವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಪ್ರಯತ್ನಶೀಲವಾಗಿದೆ ಎಂಬುದನ್ನು ವಿವರಿಸಿದರು.
ಸಿ. ಎಸ್. ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್. ಗೊನ್ಸಾಲ್ವಿಸ್, ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ಹೆಚ್ ರತ್ನಾಕರ ಶೆಟ್ಟಿ, ನಿರಂಜನ ಭಟ್ ಉಪಸ್ಥಿತರಿದ್ದರು.

0 Shares

Facebook Comments

comments