MANGALORE
ನಾಳೆ ಬೃಹತ್ ಆಧಾರ್ ಮೇಳ
ನಾಳೆ ಬೃಹತ್ ಆಧಾರ್ ಮೇಳ
ಮಂಗಳೂರು ನವೆಂಬರ್ 16: ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ CSC ಸಹಭಾಗಿತ್ವದೊಂದಿಗೆ ಬೃಹತ್ ಆಧಾರ್ ಮೇಳ ಮಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನ ಪಿ.ವಿ.ಎಸ್ ಕಲಾಕುಂಜದ ಬಳಿ ಇರುವ ಭಂಡಾರಿ ಫೆಸಿಫಿಕ್ ಬಿಲ್ಡಿಂಗ್’ನ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಲಿರುವ ಈ ಮೇಳ ನಡೆಯಲಿದೆ.
ಬೃಹತ್ ಆಧಾರ್ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ.
ಈ ಆಧಾರ ಮೇಳದಲ್ಲಿ ಹೊಸದಾಗಿ ಆಧಾರ್ ನೊಂದಣಿ ಮತ್ತು ಆಧಾರ ತಿದ್ದುಪಡಿಯನ್ನು ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮನವಿ ಮಾಡಿದೆ.
You must be logged in to post a comment Login